ಮೂಡುಬಿದಿರೆ: ಶ್ರೀ ಸಿದ್ಧೇಶ್ವರ ಧರ್ಮ ಜಾಗೃತಿ ಸಂಸ್ಥೆಯ ವತಿಯಿಂದ ಬೆಳುವಾಯಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟು ಪುಸ್ತಕಗಳನ್ನು ಗುರುವಾರ ವಿತರಿಸಲಾಯಿತು.
ಮಕ್ಕಳಲ್ಲಿ ರಾಷ್ಟ್ರಾಭಿಮಾನ, ನೈತಿಕ ಮೌಲ್ಯ, ಸುಸಂಸ್ಕಾರಗಳನ್ನು ವೃದ್ಧಿಸುವ ದೃಷ್ಟಿಯಿಂದ ಮಹಾನ್ ವ್ಯಕ್ತಿಗಳ ಸಾಹಸ, ಸ್ವಾಭಿಮಾನ, ರಾಷ್ಟ್ರಭಕ್ತಿ, ಮತ್ತು ಆದರ್ಶ ದಿನಚರಿಗಳನ್ನು ಬಿಂಬಿಸುವ ವಿಷಯಗಳನ್ನು ಒಳಗೊಂಡಿರುವ ಸಂಸ್ಕಾರ ನೋಟು ಪುಸ್ತಕಗಳನ್ನು 58 ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.

