ಮೂಡುಬಿದಿರೆ : ಡಿಸೆಂಬರ್ 17 ರಿಂದ 19ರವರೆಗೆ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪದಕ ವಿಚೇತ 24 ಕ್ರೀಡಾಪಟುಗಳು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಲಬುರ್ಗಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು 31 ಪದಕ, 14 ಚಿನ್ನದ ಪದಕ, 09 ಬೆಳ್ಳಿ ಪದಕ ಮತ್ತು 08 ಕಂಚಿನ ಪದಕ ಪಡೆಯಿತು.
ಬಾಲಕಿಯರ ವಿಬಾಗದಲ್ಲಿ 15 ಅಂಕ ಪಡೆದ ಚೈತ್ರಾ ದೇವಾಡಿಗ ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು. ಬಾಲಕರ ವಿಭಾಗದಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ ಪ್ರಜ್ವಲ್ ಮಂದಣ್ಣ(100 ಮೀ, 4*100 ರಿಲೇ – ಪ್ರಥಮ), ಅಮನ್ ಅರುಣ್ (200ಮೀ, 110ಮೀ ಹರ್ಡಲ್ಸ್, 4*100 ರಿಲೇ – ಪ್ರಥಮ, ದ್ವಿತೀಯ, ಪ್ರಥಮ), ಸಂತೋಷ್(800ಮೀ, 1500ಮೀ – ತೃತೀಯ), ಪ್ರಶಾಂತ್ ಕುಮಾರ್ (3000ಮೀ, ಗುಡ್ಡಗಾಡು ಓಟ -ದ್ವಿತೀಯ, ಆರನೇ ಸ್ಥಾನ), ಅಕ್ಷಯ್ ಚೌಹಾಣ್(400ಮೀ ಹರ್ಡಲ್ಸ್, 4×400 ರಿಲೇ – ದ್ವಿತೀಯ,ಪ್ರಥಮ), ಪ್ರದ್ಯಮ್ನ(400ಮೀ ಹರ್ಡಲ್ಸ್, 4*100 ರಿಲೇ – ತೃತೀಯ, ಪ್ರಥಮ), ಆಶಿಶ್ (ಗುಂಡು ಎಸೆತ, ಡಿಸ್ಕಸ್ ತ್ರೋ – ಪ್ರಥಮ), ಮನು ಡಿ.ಪಿ.(ಜಾವೆಲಿನ್ ತ್ರೊ – ಪ್ರಥಮ ಸ್ಥಾನ), ಶಾರುಕ್ (ಜಾವೆಲಿನ್ ತ್ರೊ – ದ್ವಿತೀಯ), ಯಮುನೂರಪ್ಪ (ಹ್ಯಾಮರ್ ತ್ರೊ – ಪ್ರಥಮ), ಪ್ರವೀಣ್ (ಹ್ಯಾಮರ್ ತ್ರೊ -ದ್ವಿತೀಯ), ಯೋಗೀಶ್ (ಪೋಲ್‍ವಾಲ್ಟ್- ಪ್ರಥಮ), ಬಸವರಾಜ್ (ಗುಡ್ಡಗಾಡು ಓಟ -ಐದನೇ ಸ್ಥಾನ), 4×100 ರಿಲೇ ಪ್ರಥಮ, 4×400 ರಿಲೇ ಪ್ರಥಮ ಹಾಗೂ ಬಾಲಕಿಯರ ವಿಭಾಗದಲ್ಲಿ ಭೂಮಿಕಾ ಡಿ. (400 ಮೀ – ಪ್ರಥಮ), ಜಯಲಕ್ಷ್ಮೀ (1500ಮೀ, ಗುಡ್ಡಗಾಡು ಓಟ – ತೃತೀಯ, ಆರನೇ ಸ್ಥಾನ), ಚೈತ್ರಾ ದೇವಾಡಿಗ (3000ಮೀ, 5000ಮೀ, ಗುಡ್ಡಗಾಡು ಓಟ – ಪ್ರಥಮ), ಅಭಿನಯ ಶೆಟ್ಟಿ(ಎತ್ತರ ಜಿಗಿತ -ಪ್ರಥಮ), ಎಸ್.ಬಿ. ಸುಪ್ರಿಯಾ(ಎತ್ತರ ಜಿಗಿತ -ತೃತೀಯ), ಬಿ.ಎನ್. ತುಂಗಶ್ರೀ (ತ್ರಿವಿಧ ಜಿಗಿತ – ದ್ವಿತೀಯ), ರುಂಜುನ್ ಪೆಗು (ಜಾವೆಲಿನ್ ತ್ರೊ – ದ್ವಿತೀಯ), ಪ್ರಿಯಾ ಎಲ್.ಡಿ. (ಗುಡ್ಡಗಾಡು ಓಟ –ಮೂರನೇ ಸ್ಥಾನ), 4*100 ರಿಲೇ ಪ್ರಥಮ, 4*400 ರಿಲೇ ದ್ವಿತೀಯ ಪದಕವನ್ನು ಪಡೆದರು.


