ವಿಟ್ಲ: ಕನ್ಯಾನ ಗ್ರಾಮದ ಬಾಳೆಕೋಡಿ ಶ್ರೀ ಕಾಶಿಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಬಳಿ ಅನಧಿಕೃತವಾಗಿ ತಲೆಯೆತ್ತಿರುವ ಮದ್ಯದಂಗಡಿ ವ್ಯಾಪಾರವನ್ನು 2017ರ ಫೆ.2ರ ವರೆಗೆ ಸ್ಥಗಿತಗೊಳಿಸಬೇಕೆಂದು ಬೆಂಗಳೂರು ಅಬಕಾರಿ ನ್ಯಾಯಾಲಯ ನಿರ್ದೇಶಿಸಿದ್ದರೂ ಕಾನೂನನ್ನು ಗಾಳಿಗೆ ತೂರಿ ಕಾರ್ಯಾಚರಿಸುತ್ತಿರುವುದಕ್ಕೆ ಆಕ್ಷೇಪವಿದೆ ಎಂದು ಶ್ರೀ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಎಚ್ಚರಿಸಿದ್ದಾರೆ.

54cb247202dc9_-_jameson-on-the-rocks-0609-lg

ಕ್ಷೇತ್ರದ ಬಳಿ ಮಧ್ಯದಂಗಡಿ ನಿರ್ಮಾಣವಾಗುವ ಸುದ್ದಿ ತಿಳಿದಾಗಲೇ ಆಕ್ಷೇಪಿಸಿದ್ದೆವು. ಸ್ಥಳೀಯ ಗ್ರಾಮ ಪಂಚಾಯಿತಿ ಪರವಾನಿಗೆ ನೀಡಿದ್ದರೂ ಬಂಟ್ವಾಳ ತಾ.ಪಂ.ನಡಾವಳಿಯಂತೆ ಗ್ರಾ.ಪಂ.ನಿರ್ಣಯವನ್ನು ತಡೆಹಿಡಿದು ನಿರ್ಣಯ ಕೈಗೊಳ್ಳಲಾಗಿತ್ತು. ಬೆಂಗಳೂರು ಅಬಕಾರಿ ಕಮಿಷನರ್ ಪರವಾನಿಗೆ ರದ್ದುಪಡಿಸಿದ್ದಾರೆ. ಕಟ್ಟಡದ ಪರವಾನಿಗೆ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಯವರ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುತ್ತದೆ ಎಂದು ಅವರು ಕ್ಷೇತ್ರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ ತಿಳಿಸಿದರು.

ಬಾರ್ ಇರುವ ಕಟ್ಟಡ ಸಂಖ್ಯೆ 4/17 ವಾಸ್ತವ್ಯದ ಮನೆ ಹಾಗೂ ಧಾರ್ಮಿಕ ಸ್ಥಳಗಳ 100 ಮೀಟರ್ ಒಳಗಡೆ ಇರುವುದಾಗಿ ವರದಿ ಸಲ್ಲಿಸಲಾಗಿದೆ. ಆದರೆ ಈ ಮದ್ಯದಂಗಡಿಯಿಂದ ಕ್ಷೇತ್ರದ ಕಚೇರಿಗೆ 63 ಮೀಟರ್, ಅಂಬೇಡ್ಕರ್ ಪ್ರತಿಮೆಗೆ 84 ಮೀಟರ್, ಸ್ವಾಮೀಜಿಯವರ ಆಶ್ರಮ ಹಾಗೂ ಅನ್ನಛತ್ರಕ್ಕೆ 68 ಮೀಟರ್, ದೇವರ ಬನ ಮತ್ತು ಗುಳಿಗ ಸಾನ್ನಿಧ್ಯ ಇರುವ ಗೋಳಿಮರದ ಬುಡಕ್ಕೆ 25 ಮೀಟರ್, ಡೊಂಬಯ್ಯ ನಲಿಕೆಯವರ ವಾಸ್ತವ್ಯದ ಮನೆಗೆ 27 ಮೀಟರ್ ದೂರದಲ್ಲಿದೆ ಎಂದರು.

ಕಾನೂನು ಪ್ರಕಾರ ಅಧಿಕಾರಿಗಳು ಇದನ್ನು ಪರಿಶೀಲಿಸಿ, ನಿಯಮಾನುಸಾರ ಸೂಕ್ತ ಕ್ರಮಕೈಒಳ್ಳಬೇಕೆಂದು ದ.ಕ.ಜಿಲ್ಲಾಧಿಕಾರಿ ಕಚೇರಿಯಿಂದ ಅಬಕಾರಿ ಉಪಾಯುಕ್ತರಿಗೆ ಮಾಹಿತಿ ನೀಡಲಾಗಿದೆ. ಇಷ್ಟೆಲ್ಲ ಕಾನೂನುಗಳಿಗೆ ವಿರೋಧವಾಗಿ ಕ್ಷೇತ್ರದ ಬಳಿ ಮದ್ಯದಂಗಡಿ ನಡೆಸುವುದಕ್ಕೆ ಅನುಮತಿ ನೀಡಿದ್ದು ಸರಿಯಲ್ಲ. ಇದನ್ನು ಖಂಡಿಸಿ, ಪ್ರತಿಭಟನೆಯನ್ನೂ ಮಾಡಲಾಗಿತ್ತು. ಇದೀಗ ನ್ಯಾಯಾಲಯವೂ ಕ್ಷೇತ್ರದ ಬಳಿ ಬಾರ್ ನಡೆಸಬಾರದೆಂದು ಹೇಳಿದೆ. ಆದರೂ ವ್ಯಾಪಾರ ನಿಲ್ಲಿಸದೆ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವುದು ದುರಂತ ಎಂದು ಅವರು ಹೇಳಿದರು.

ನ್ಯಾಯವಾದಿ ಗಿರೀಶ್ ಮುಳಿಯಾಲ ಮತ್ತು ಕ್ಷೇತ್ರದ ಕಾರ್ಯನಿರ್ವಹಣಾ„ಕಾರಿ ಜಯಪ್ರಸಾದ್ ಬಾಳೆಕೋಡಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *