ವಿಟ್ಲ: ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ಅಪ್ರಾಪ್ತೆಯನ್ನು ವಿಟ್ಲ ಪೊಲೀಸರ ತಂಡ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಸಮೀಪ ಪತ್ತೆ ಹಚ್ಚಿದ ಘಟನೆ ಶುಕ್ರವಾರ ನಡೆದಿದೆ.

logo

ಪೆರುವಾಯಿ ಗ್ರಾಮದ 17 ವರ್ಷದ ಯುವತಿ ಡಿ.11ರಂದು ಮನೆಯಿಂದ ವಿಟ್ಲ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಬಳಿಕ ಮನೆಗೆ ಹಿಂದಿರುಗಿರಲಿಲ್ಲ. ಈ ಬಗ್ಗೆ ಠಾಣೆಗೆ ದೂರು ನೀಡಲಾಗಿತ್ತು. ಯುವತಿ ದೂರವಾಣಿ ಟವರ್ ಲೊಕೇಶ್ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು ಯುವತಿಯನು ಚಾಮರಾಜ ನಗರ ಜಿಲ್ಲೆಯ ಕೊಳ್ಳೆಗಾಲ ಮುಳ್ಳೂರು ಎಂಬಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ನಾಗರಾಜ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರವೀಣ್ ರೈ, ಭವಿತ್ ರೈ ಕಾರ್ಯಾಚರಣೆ ನಡೆಸಿದ್ದರು.

By Suddi9

Leave a Reply

Your email address will not be published. Required fields are marked *