ಬಜಪೆ: ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಜಾತ್ರಾಮಹೋತ್ಸವವು ಜ.11ರಿಂದ 16ರವರೆಗೆ ಜರುಗಲಿದೆ.

ekkaru

ಜ.11ರಂದು ಧ್ವಜಾರೋಹಣ, ಮತ್ತು ಉಲ್ಲಾಯ ದೈವದ ನೇಮೋತ್ಸವ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ, ಜ.12ರಂದು ಕಾಂತೇರಿ ಧೂಮಾವತಿ ದೈವದ ನೇಮೋತ್ಸವ, ಜ.13ರಂದು ಜಾರಂದಾಯ ದೈವದ ನೇಮೋತ್ಸವ, ಜ.14ರಂದು ಸರಳ ಧೂಮಾವತಿ ದೈವದ ನೇಮೋತ್ಸವ, ಜ.15ರಂದು ವ್ಯಾಘ್ರ ಚಾಮುಂಡಿ (ಪಿಲಿಚಂಡಿ) ದೈವದ ನೇಮೋತ್ಸವ, ಜ.16ರಂದು ಧ್ವಜಾವರೋಹಣವಾಗಿ ಭಂಡಾರ ಇಳಿಯುವುದು ಹಾಗೂ ವಿಶೇಷವಾಗಿ ಈ ವರ್ಷದ ಜಾತ್ರಾ ಸಮಯದಲ್ಲಿ ಉಲ್ಲಾಯ ದೈವದ ಬೆಳ್ಳಿಯ ಮುಡಿ ಹಾಗೂ ಕಾಂತೇರಿ ಧೂಮಾವತಿ ದೈವಕ್ಕೆ ಬೆಳ್ಳಿಯ ಅಣಿ ಸಮರ್ಪಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *