ಕೈಕಂಬ: ಯಕ್ಷಗಾನ ಕ್ಷಯವಾಗದೆ ಅಕ್ಷಯವಾಗಲಿ. ಮಕ್ಕಳನ್ನು ಯಕ್ಷಗಾನಕ್ಕೆ ಸೇರಿಸಿದರೆ ದೇವರ ಸೇವೆ ಮಾಡಿದಂತಾಗುತ್ತದೆ. ಸಂಭಾವಣೆ, ಗೌರವದ ಜೊತೆ ಗುರು-ಶಿಷ್ಯ ಪರಂಪರೆಯನ್ನು ಬೆಳೆಸಿದಂತಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯ ಪಿ.ಕಿಶನ್ ಹೆಗ್ಡೆ ನುಡಿದರು.

16-vp-yakshotsava

ಇವರು ಡಿ.12ರಂದು ಬಜ್ಪೆ ಮುರನಗರದಲ್ಲಿ ಜರಗಿದ ಶ್ರೀಶ ಯಕ್ಷೋತ್ಸವ ಮುರನಗರ ಕೊಳಂಬೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಮತ್ತು ಶ್ರೀ ಚೀರುಂಭ ಭಗವತಿ ಯಕ್ಷಗಾನ ಮಂಡಳಿ ಉಳ್ಳಾಲ ಇದರ ಜಂಟಿ ಆಶ್ರಯದಲ್ಲಿ ನಡೆದ “ಶ್ರೀಶ ಯಕ್ಷೋತ್ಸವ ಸಪ್ತಾಹ”-2016 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಿರುದ್ಯೋಗಿಗಳಿಗೆ ಕೆಲಸ ಇಲ್ಲ ಎಂಬ ಚಿಂತೆ ಬೇಡ ಯಕ್ಷಗಾನದಲ್ಲಿ ವಿಪುಲ ಅವಕಾಶವಿದೆ. ಒಂದು ಬೆಳಕಿನ ಸೇವೆ ಮಾಡಿಸಿದರೆ, ಒಂದು ಚಂಡಿಕಾ ಹೋಮ ನಡೆಸಿದ ಪುಣ್ಯ ಲಭಿಸುತ್ತದೆ. ಪ್ರೇಕ್ಷಕರ ಪ್ರೋತ್ಸಾಹ ಯಕ್ಷಗಾನಕ್ಕೆ ಅತೀ ಅಗತ್ಯ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಂದ್ರಹಾಸ್ ಉಳ್ಳಾಲ್ ಅವರು ಮಾನವ ಕೊಟ್ಟದ್ದು ಮನೆ ತನಕ ದೇವರು ಕೊಟ್ಟದ್ದು ಕೊನೆ ತನಕ. ಕೆ.ಟಿ.ಗುಜರನ್ ಅವರ 35 ವರ್ಷದ ಯಕ್ಷ ಸೇವೆಗೆ ಜನರ ಪ್ರೋತ್ಸಾಹ ಸಿಗುವಂತಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಳುವ ಬೊಳ್ಳಿ ದಯಾನಂದ ಜಿ.ಕತ್ತಲ್‍ಸಾರ್ ಮಾತನಾಡಿ ಕೆ.ಟಿ.ಗುಜರನ್ ಅವರು ಯಕ್ಷಲೋಕದ ಚಂದ್ರ ಎಂದು ಬಣ್ಣಿಸಿದರು. ಸುಂಕದಕಟ್ಟೆಯ ಶ್ರೀ ನಿರಂಜನ ಸ್ವಾಮೀಜಿಯವರು ಶಿಕ್ಷಣ ಕ್ರಾಂತಿಯನ್ನೇ ಮಾಡಿದವರು ನಂತರದ ಸ್ಥಾನದಲ್ಲಿ ಕೆ.ಟಿ ಗುಜರನ್ ಅವರು ಯಕ್ಷ ಸಾಧನೆ ಮಾಡಿದವರು ಎಂದು ನುಡಿದರು.

ಅತಿಥಿಯಾಗಿ ಭಾಗವಹಿಸಿದ ಯಶವಂತ್ ಉಳ್ಳಾಲ್ ಅವರು ಕೆ.ಟಿ ಗುಜರನ್ ಸಾರಥ್ಯದಲ್ಲಿ ನಡೆಯುವ ಉಳ್ಳಾಲ ಮೇಳವು ಉಜ್ವಲವಾಗಿ ಬೆಳಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕಲಾಪೋಷಕರಾದ ಪೂವಮ್ಮ ಮತ್ತು ವಿಠಲ ಡ್ರೈವರ್ ಅವರನ್ನು ಸನ್ಮಾನಿಸಲಾಯಿತು. ಆನಂದ ಬಂಗೇರ ಮುರನಗರ, ಚಂದ್ರಹಾಸ ಬೆಳ್ಚಡ, ಮರೋಳಿ ಕತ್ತಲ್‍ಸಾರ್, ಉಪಸ್ಥಿತರಿದ್ದರು. ಕೆ.ಟಿ ಗುಜರನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಜ್ಪೆಯ ಆರ್.ಕೆ ಸ್ಟುಡಿಯೋ ಸಹಕರಿಸಿದರು. ಶೇಖರ್ ಸಾಲ್ಯಾನ್ ಕತ್ತಲ್‍ಸಾರ್ ಧನ್ಯವಾದಗೈದರು. ಪುರುಷೋತ್ತಮ ಗೋಳಿಪಲ್ಕೆ ನಿರೂಪಿಸಿದರು. ಶ್ರೀ ಗುರು ವಿಜಯ ವಿಠಲ ಯಕ್ಷಗಾನ ತರಬೇತಿ ಕೇಂದ್ರ ಬಜ್ಪೆ ಬಾಲ ಕಲಾವಿದರಿಂದ “ವೀರ ವೀರವರ್ಮ” ಯಕ್ಷಗಾನ ಪ್ರದರ್ಶನಗೊಂಡಿತು.

By suddi9

Leave a Reply

Your email address will not be published. Required fields are marked *