ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯ ದಶಮಾನೋತ್ಸವವು ಡಿ.17ರಂದು ಜರುಗಲಿದೆ.
ಬೆಳಿಗ್ಗೆ 9.30ಕ್ಕೆ ಎಸ್.ಡಿ.ಎಮ್.ಸಿ ಕಾರ್ಯಾಧ್ಯಕ್ಷ ಉಮೇಶ್ ಆಚಾರ್ಯ ಧ್ವಜಾರೋಹಣಗೈಯುವರು. 11ಗಂಟೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ” ಪ್ರತಿಭಾ ಪುರಸ್ಕಾರ” ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ. ಕಾರ್ಯಕ್ರಮ ಉದ್ಘಾಟಿಸಲಿರುವರು. ಪೊಳಲಿ ರಾಮಕೃಷ್ಣ ತಪೋವನ ಶ್ರೀ ವಿವೇಕ ಚೈತ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಗೌರವಾನ್ವಿತ ಅತಿಥಿಗಳಾಗಿ ವೆಂಕಟೇಶ ನಾವಡ ಪೊಳಲಿ, ಸೇಸಪ್ಪ ಕೋಟ್ಯಾನ್ ಪಚಿನಡ್ಕ, ರುಕ್ಕಯ್ಯ ಬಂಗೇರ ಪಲ್ಲಿಪಾಡಿ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸಜೀಪಮುನ್ನೂರು ಜಿ.ಪಂ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ತಾ,ಪಂ ಸದಸ್ಯ ಯಶವಂತ ಪೊಳಲಿ, ಕರಿಯಂಗಳ ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರಿನ ಉಪನಿರ್ದೇಶಕ ವಾಲ್ಟರ್ ಡಿ’ಮೆಲ್ಲೋ, ಶಿಕ್ಷಣಾಧಿಕಾರಿ ಲೋಕೇಶ್ ಸಿ., ಕರಿಯಂಗಳ ಗ್ರಾ.ಪಂ ಸದಸ್ಯರುಗಳಾದ ಲೋಕೇಶ್ ಭರಣಿ ಹಾಗೂ ವೀಣಾ ಆಚಾರ್ಯ, ಶ್ರೀ ರಾಜರಾಜೇಶ್ವರಿ ದೇವಳದ ಆಡಳಿತ ಮೋಕ್ತೇಸರಾದ ಮಂಜಯ್ಯ ಶೆಟ್ಟಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ ನಾಯಕ್, ಪೊಳಲಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿರುವರು.
ನಂತರ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಮತ್ತು “ಶೂರ್ಪನಖಿ ಮಾನಭಂಗ” ಎಂಬ ಯಕ್ಷಗಾನ ಜರುಗಲಿದೆ ಎಂದು ಪ್ರಕಟನೆ ತಿಳಿಸಿದೆ.

