ಬಿ.ಸಿ.ರೋಡು : ಸುಮಾರು ಎಂಟು ವರ್ಷಗಳ ನಂತರ ಬಂಟ್ವಾಳ ತಾಲೂಕಿನಲ್ಲಿ ಡಿ.19ರಂದು ಬಿ.ಸಿ.ರೋಡಿನ ರಂಗೋಲಿಯಲ್ಲಿ ಸಂಜೆ 3ರಿಂದ ರಾತ್ರಿ 10ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಉಸ್ತುವಾರಿ ಸಚಿವ ರಮಾನಾಥ ರೈಯವರು ತಿಳಿಸಿದರು.
ಅವರು ಶುಕ್ರವಾರ ಎಸ್‍ಜೆಎಸ್‍ಆರ್‍ವೈ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಸಭಾಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಕರಾವಳಿ ಉತ್ಸವ ಮೆರವಣಿಗೆ: ಮೆರವಣಿಗೆಯು ಬಿ.ಸಿ.ರೋಡಿನಿಂದ ಶ್ರೀ ನಾರಾಯಣ ವೃತ್ತ ಹೊರಟು ಕೈಕಂಬವಾಗಿ ರಂಗೋಲಿ ಸಂಭಾಂಗಣದ ವರೆಗೆ ಕೊಂಬು, ಶಾಲಾ ಮಕ್ಕಳ ಬ್ಯಾಂಡ್ ಸೆಟ್, ಸ್ಕೌಟ್ ಗೈಡ್, ಚೆಂಡೆ, ಚಿಲಿಪಿಲಿಗೊಂಬೆ ಬಳಗ, ಯಕ್ಷಗಾನ ಗೊಂಬೆ, ಶಾರ್ದೂಲ, ಕೀಲು ಕುದುರೆ, ಕರಗ, ದಫ್ ಹಾಡುಗಳೊಂದಿಗೆ ವಿಜೃಂಭಣೆಯಿಂದ ನಡೆಯುವ ಮೆರವಣಿಗೆಯನ್ನು ದ.ಕ.ಜಿ.ಪಂ. ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಲಿದ್ದಾರೆ.
ಸಭಾ ಸಮಾರಂಭದ ಉದ್ಘಾಟನೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಆಹಾರ ಸಚಿವ ಯು.ಟಿ ಖಾದರ್ ಗೌರವ ಉಪಸ್ಥಿತರಿರಲಿರುವರು. ಬಂಟ್ವಾಳದ ಹಿರಿಯ ಸಾಹಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪುತ್ತೂರು ಶಾಸಕಿ ಶಕುಂತಳಾ ಟಿ.ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಕೆ. ಪ್ರತಾಪಚಂದ್ರ ಶೆಟ್ಟಿ, ಗೇರು ನಿಗಮ ಅಧ್ಯಕ್ಷ ಬಿ.ಹೆಚ್. ಖಾದರ್, ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ವಿಟ್ಲ ಪಟ್ಟಣ ಅಧ್ಯಕ್ಷ ಅರುಣ್, ಸ್ಥಾಯಿಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಜಿಲ್ಲಾಧಿಕಾರಿ ಡಾ, ಕೆ.ಜಿ. ಜಗದೀಶ್, ಕಾರ್ಯನಿರ್ವಹಣಾದಿಕಾರಿ ಎಂ.ಆರ್.ರವಿ, ಪೊಲೀಸ್ ಅದೀಕ್ಷಕ ಭೂಷಣ್ ಗುಲಾಬ್ ರಾವ್ ಬೊರಸೆ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರಿ ಅಶ್ವಿನಿ ಹೊಳ್ಳ ಅಮ್ಟೂರುರವರಿಂದ ಇವರಿಂದ ಭರತನಾಟ್ಯ, ನರಿಕೊಂಬು ಕುಮಾರಿ ಐಶ್ವರ್ಯ ಜಾನಪದ ನೃತ್ಯ, ಪೃಥ್ವೀರಾಜ್ ಬಂಟ್ವಾಳ ಇವರಿಂದ ಗಾಯನ, ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ಅಂಗನವಾಡಿ ಕಾರ್ಯಕರ್ತೆಯರಿಂದ ನೃತ್ಯ, ಬಲೇ ತೆಲಿಪಾಲೆ ಖ್ಯಾತಿಯ ಅರುಣ್ ಚಂದ್ರ ಮತ್ತು ಬಳಗದವರಿಂದ ಹಾಸ್ಯ ತುಣುಕು, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ಜಾನಪದ ನೃತ್ಯಗಳು, ಪಟ್ಟಾಭಿರಾಮ ಸುಳ್ಯ ಇವರಿಂದ ಹಾಸ್ಯಲೋಕ ನಗೆಹಬ್ಬ ನಡೆಯಲಿದೆ ಎಂದು ಸಹಾಯಕ ಆಯುಕ್ತ ರೇಣುಕಾಪ್ರಸಾದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಕರಾವಳಿ ಉತ್ಸವ ಮೆರಣಿಗೆ ಸಮಿತಿ ಸಂಚಾಲಕ ಸುದರ್ಶನ್ ಜೈನ್, ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಉಪಸ್ಥಿತರಿದ್ದರು.

