ಬಂಟ್ವಾಳ: 2016-2017 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾಡಳಿತ ಬಂಟ್ವಾಳ “ಕರಾವಳಿ ಉತ್ಸವ” ಡಿ.19ರಂದು ಹೋಟೇಲ್ ರಂಗೋಲಿ ಸಭಾಂಗಣ ಬಿಸಿರೋಡ್‍ನಲ್ಲಿ ಜರುಗಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕರಾವಳಿ ಉತ್ಸವದ ಮೆರವಣಿಗೆಯನ್ನು ಉದ್ಘಾಟಿಸಲಿರುವರು. ಶ್ರೀ ನಾರಾಯಣ ಗುರು ವೃತ್ತದಿಂದ, ಬಿಸಿರೋಡ್- ಕೈಕಂಬ ಮಾರ್ಗವಾಗಿ ಹೋಟೇಲ್ ರಂಗೋಲಿ ಸಭಾಂಗಣದವರೆಗೆ ಮೆರವಣಿಗೆ ನಡೆಯಲಿದೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕರಾವಳಿ ಉತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬಂಟ್ವಾಳ ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ವಿಶೇಷ ಉಪನ್ಯಾಸ ನೀಡಲಿರುವರು. ಗೌರವಾನ್ವಿತ ಅತಿಥಿಯಾಗಿ ಆಹಾರ ಮತ್ತು ನಾಗರಿಕ ಸಚಿವ ಯು.ಟಿ ಖಾದರ್ ಹಾಗೂ ಮುಖ್ಯ ಅತಿಥಿಗಳಾಗಿ ಸರಕಾರಿ ಮುಖ್ಯ ಸಚೇತಕ ಐವನ್ ಡಿ’ಸೋಜ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪುತ್ತೂರು ವಿಧಾನ ಸಭಾ ಕ್ಷೇತ್ರ ಹಾಗೂ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ.ಶೆಟ್ಟಿ, ಲೋಕ ಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ತು ಶಾಸಕರುಗಳಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕೆ.ಪ್ರತಾಪಚಂದ್ರ ಶೆಟ್ಟಿ ಉಪಸ್ಥಿತರಿರುವರು.
ಈ ಸಂದರ್ಭ ಅಮ್ಟೂರು ಅಶ್ವಿನಿ ಹೊಳ್ಳ ಇವರಿಂದ “ಭರತನಾಟ್ಯ”, ನರಿಕೊಂಬು ಕು| ಐಶ್ವರ್ಯ ಇವರಿಂದ “ಜಾನಪದ ನೃತ್ಯ”, ಪ್ರಥ್ವಿರಾಜ್ ಬಂಟ್ವಾಳ ಇವರಿಂದ “ಗಾಯನ”, ಹಾಗೂ ಶಾಲಾ ವಿದ್ಯಾರ್ಥಿಗಳಿಂದ “ವೈವಿಧ್ಯಮಯ ಕಾರ್ಯಕ್ರಮ”, ಅಂಗನವಾಡಿ ಕಾರ್ಯಕರ್ತೆಯವರಿಂದ “ನೃತ್ಯ”, ಅರುಣ್ ಚಂದ್ರ ಮತ್ತು ಬಳಗದವರಿಂದ “ಬಲೆ ತೆಲಿಪಾಲೆ“, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ “ಜಾನಪದ ನೃತ್ಯಗಳು”, ಪಟ್ಟಾಭಿರಾಮ ಸುಳ್ಯ ಇವರಿಂದ “ಹಾಸ್ಯ ಲೋಕ ನಗೆಹಬ್ಬ” ಜರುಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಸದಾನಂದ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಸುದರ್ಶನ್ ಜೈನ್, ಸದಾನಂದ ಮಲ್ಲಿ, ಸೇಸಪ್ಪ ಕೋಟ್ಯಾನ್, ಅಮ್ಮು ರೈ, ಪ್ರಕಾಶ್ ಕಾರಂತ್, ಸ್ಟ್ಯಾನಿ ಲೋಬೋ, ಕೆ.ರವೀಂದ್ರ ಕಂಬಳಿ, ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು, ಬಂಟ್ವಾಳ ತಾಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಹಕಾರ ನೀಡಲಿದ್ದಾರೆ.

