ಬಂಟ್ವಾಳ: ಪ್ರಧಾನಮಂತ್ರಿ ಯವರ ಡಿಜಿಟಲ್ ಇಂಡಿಯಾದ ಪರಿಕಲ್ಪನೆಯಂತೆ ವಿಜಯಾಬ್ಯಾಂಕ್ ದೇಶದ ನೂರು ಹಳ್ಳಿಗಳ ನಿರ್ಮಾಣಕ್ಕೆ ಮುಂದಾಗಿದ್ದು, ಈ ಪೈಕಿ ಮಾಣಿ ಗ್ರಾಮವೂ ಸೇರಿದೆ ಎಂದು ಮಂಗಳೂರು ವಿಜಂiÀi ಬ್ಯಾಂಕಿನ ವಿಭಾಗೀಯ ಅಧಿಕಾರಿ ವಸಂತ್ ರಾಜ್ ಹೇಳಿದರು.

mani

ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ಕುರಿತಾಗಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಡಿಜಿಟಲ್ ಬ್ಯಾಂಕಿಗ್ ವ್ಯವಸ್ಥೆಯ ಮೂಲಕ ನಗದು ರಹಿತ ಸೇವೆ ನೀಡಲು ವಿಜಯಾ ಬ್ಯಾಂಕ್ ಬದ್ಧವಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮಾಣಿ ಗ್ರಾಮದಲ್ಲಿ ಹಲವು ಮೂಲಭೂತ ವ್ಯವಸ್ಥೆ ಒದಗಿಸಲಾಗುವುದು ಎಂದವರು ಹೇಳಿದರು. ಕಪ್ಪುಹಣ, ಭಯೋತ್ಪಾದನೆ, ಭ್ರಷ್ಟಾಚಾರ ನಿಗ್ರಹದ ಆಶಯವನ್ನು ಇರಿಸಿಕೊಂಡು ಕೇಂದ್ರ ಸರ್ಕಾರ 500 ಹಾಗೂ 1000 ರೂ ಮೌಲ್ಯದ ನೋಟು ಗಳನ್ನು ರದ್ದುಪಡಿಸಿದ್ದು, ಹೊಸ ನೋಟುಗಳು ಬಿಡುಗಡೆಗೊಂಡು ಎಲ್ಲರ ಕೈ ಸೇರುತ್ತಿದೆ ಎಂದರು.

ಹಿರಿಯ ಶಾಖಾ ವ್ಯವಸ್ಥಾಪಕ ಪ್ರಶಾಂತ್ ಕುಮಾರ್ ಮಾತನಾಡಿ, ನಗದು ರಹಿತ ಸೇವೆಗೆ ಮುನ್ನುಡಿ ಬರೆಯುವ ನಿಟ್ಟಿನಲ್ಲಿ ಮಾಣಿಯಲ್ಲಿ ವೈಫೈ ಅಳವಡಿಸಲಾಗುವುದು, ಮಾಣಿಯ ಆಯ್ದ ಐದು ಅಂಗಡಿಗಳಲ್ಲಿ ಸ್ವೈಪಿಂಗ್ ಯಂತ್ರ ಅಳವಡಿಸಲಾಗುವುದು ಹಾಗೂ ವಿಜಯಾ ಬ್ಯಾಂಕ್ ನಲ್ಲಿ ವಿಪೇ ಎನ್ನುವ ವಿಶಿಷ್ಟ ಸೇವೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಮಾಣಿ ಶಾಖಾ ವ್ಯವಸ್ಥಾಪಕ ತಾಜುದ್ದೀನ್, ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ.ಶೆಟ್ಟಿ ಸ್ವಾಗತಿಸಿ, ವಿಜಯಬ್ಯಾಂಕ್ ಸಿಬ್ಬಂದಿ ನವಾಝ್ ವಂದಿಸಿದರು.

By Suddi9

Leave a Reply

Your email address will not be published. Required fields are marked *