ಬಂಟ್ವಾಳ: ಪ್ರಸಕ್ತ ಸಮಾಜದಲ್ಲಿ ಅಮೂಲ್ಯ ಸಮಯವನ್ನು ವೈಯಕ್ತಿಕ ಜೀವನಕ್ಕೆ ಸೀಮಿತಗೊಳಿಸದೆ ಬಹುತೇಕ ಸಮಾಜಕ್ಕೋಸ್ಕರ ವಿನಿಯೋಗಿಸುವುದರ ಜೊತೆಗೆ ಕೆಲಸದ ಒತ್ತಡದ ನಡುವೆಯೂ ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಪೊಲೀಸರು ಮತ್ತು ಪತ್ರಕರ್ತರು ಒಂದು ನಾಣ್ಯದ ಎರಡು ಮುಖಗಳಂತೆ ತೀರಾ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಸಮಾಜವು ಕೂಡಾ ಅವರೊಂದಿಗೆ ಪರಸ್ಪರ ಅನ್ಯೋನ್ಯತೆ ಬೆಳೆಸಿಕೊಂಡು ಪ್ರೋತ್ಸಾಹ ನೀಡಿದಾಗ ಮಾತ್ರ ಮತ್ತಷ್ಟು ಜನಸ್ನೇಹಿಯಾಗಿ ಅವರು ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್.ಹೇಳಿದ್ದಾರೆ.

lions-1

ಬಂಟ್ವಾಳ ತಾಲ್ಲೂಕಿನ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಹಾಗೂ ಲಯನ್ಸ್ ಸೇವಾ ಟ್ರಸ್ಟಿನ ಸಹಭಾಗಿತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಪತ್ರಕರ್ತರಿಗಾಗಿ ಬಿ.ಸಿ.ರೋಡ್‍ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಅಶ್ವಿನಿ ಬಾಳಿಗಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾನಸಿಕ ತಜ್ಞೆ ಡಾ.ಕ್ಯಾರೊಲಿನ್ ಪಿ.ಡಿಸೋಜ, ಯೋಗಗುರು ಡಾ.ರಘುವೀರ್ ಅವಧಾನಿ, ಡಾ.ನರಸಿಂಹ ಪೈ, ಡಾ.ಅಭಿಷೇಕ್ ಇವರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು. ಇದೇ ವೇಳೆ ಅತ್ಯಾಧುನಿಕ ಯಂತ್ರೋಪಕರಣ ಸಹಿತ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಇಲ್ಲಿನ ಪೊಲೀಸರು ಮತ್ತು ಪತ್ರಕರ್ತರು ಪಾಲ್ಗೊಂಡರು.

ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಜಯಂತ ಶೆಟ್ಟಿ, ಜಿಲ್ಲಾ ಸಂಯೋಜಕ ದಾಮೋದರ ಬಿ.ಎಂ., ಅಧ್ಯಕ್ಷ ಲಕ್ಷ್ಮಣ ಕುಲಾಲ್, ವೈದ್ಯಕೀಯ ಸಂಘದ ಕೋಶಾಧಿಕಾರಿ ಡಾ.ಕೃಷ್ಣಮೂರ್ತಿ ಭಟ್, ಪ್ರಮುಖರಾದ ಡಾ.ವಸಂತ ಬಾಳಿಗಾ, ಡಾ.ಬಿ.ವಿ.ಕಾಮತ್, ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ನಗರ ಠಾಣಾಧಿಕಾರಿ ನಂದ ಕುಮಾರ್ ಮತ್ತಿತರರು ಇದ್ದರು. ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಅಶ್ವಿನಿ ಬಾಳಿಗಾ ಸ್ವಾಗತಿಸಿ, ಕಾರ್ಯದರ್ಶಿ ಡಾ.ಮಹೇಶ ಭಟ್ ವಂದಿಸಿದರು.

By Suddi9

Leave a Reply

Your email address will not be published. Required fields are marked *