ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ವಿವೇಕ ಜಾಗೃತ ಬಳಗದ ವತಿಯಿಂದ ವಿವೇಕ ಕಿರಣ ಮಂದಿರದ ಅಷ್ಟಮ ವರ್ಧಂತ್ಸುವ ಪ್ರಯುಕ್ತ ಭಾನುವಾರ ಆರಂಭಗೊಂಡ ಒಂದು ವಾರಗಳ ಶ್ರೀ ಗುರು ಚರಿತಾಮೃತ ಪ್ರವಚನ ಸಪ್ತಾಹ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಅನುವಂಶಿಕ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ಆಶೀರ್ವಚನ ನೀಡಿದರು. ವಿದ್ವಾನ್ ಡಾ.ವಾಸುದೇವ ಲಕ್ಷ್ಮೀನಾರಾಯಣ ಭಟ್, ಜಾಗೃತ ಬಳಗ ಅಧ್ಯಕ್ಷ ಮಾಧವ ಅಂಚನ್, ಪ್ರಮುಖರಾದ ಗಿರೀಶ್ ಹೆಗ್ಡೆ, ಮಧುಸೂದನ್ ಮತ್ತಿತರರು ಇದ್ದರು.

