ನಂದಿನಿ ಎನ್.ರೈ
ಬಂಟ್ವಾಳ: ತಾಲ್ಲೂಕಿನ ಕೊಯಿಲ ನಿವಾಸಿ, ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ದಿವಂಗತ ಕೂಡೂರು ನಾರಾಯಣ ರೈ ಇವರ ಪತ್ನಿ ನಂದಿನಿ ಎನ್.ರೈ (83) ಇವರು ಅಸೌಖ್ಯದಿಂದ ಮಂಗಳವಾರ ಸಂಜೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಇವರ ಅಂತ್ಯಕ್ರಿಯೆ ಕೊಯಿಲ ಮನೆ ಸಮೀಪದಲ್ಲಿ ಬುಧವಾರ ಬೆಳಿಗ್ಗೆ ನೆರವೇರಿತು.
ಮದ್ದಲೆ ವಾದಕ ಶಿರಂಕಲ್ಲು ರಾಮಕೃಷ್ಣ ಭಟ್
ಬಂಟ್ವಾಳ: ತಾಲ್ಲೂಕಿನ ಕೊಯಿಲ ಗ್ರಾಮದ ದಾಜಿಮಾರು ನಿವಾಸಿ, ಯಕ್ಷಗಾನ ಕ್ಷೇತ್ರದ ಹಿರಿಯ ಮದ್ದಲೆವಾದಕ ಶಿರಂಕಲ್ಲು ರಾಮಕೃಷ್ಣ ಭಟ್(80) ಇವರು ಹೃದಯಾಘಾತದಿಂದ ಮಂಗಳವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ ಮಾತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ಮನೆ ಸಮೀಪದಲ್ಲಿ ನೆರವೇರಿತು. ಕಳೆದ 35 ವರ್ಷಗಳಿಗೂ ಮಿಕ್ಕಿ ಅವಧಿಯಲ್ಲಿ ವಿವಿಧ ಯಕ್ಷಗಾನ ಮೇಳಗಳಲ್ಲಿ ಮದ್ದಲೆ ವಾದಕರಾಗಿ ಜನಪ್ರಿಯರಾಗಿದ್ದರು.
ತೀರಾ ಬಡ ಕೃಷಿಕರಾಗಿದ್ದ ಇವರು ಕಳೆದ ಹಲವು ಸಮಯದಿಂದ ಅಸೌಖ್ಯದಿಂದ ಇದ್ದರೂ ಯಾವುದೇ ಕಲಾವಿದರು, ಜನಪ್ರತಿನಿಧಿಗಳು ಅಥವಾ ಸಕರ್ಾರದಿಂದ ಕಿಂಚಿತ್ ಸಹಕಾರವೂ ದೊರೆತಿಲ್ಲ ಎಂದು ಸ್ಥಳೀಯರು ಖೇದ ವ್ಯಕ್ತಪಡಿಸಿದ್ದಾರೆ.

