ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಶ್ರೀ ಕೃಷ್ಣನಗರದಲ್ಲಿ ಕಲಾಶ್ರೀ ಮಿತ್ರಬಳಗ, ಮಹಿಳಾ ಬಳಗ ಮತ್ತು ಮಾತೃಭೂಮಿ ಸೇವಾ ಪ್ರತಿಷ್ಠಾನ ಇವರ ಜಂಟಿ ಆಶ್ರಯದಲ್ಲಿ ಡಿ.18ರಂದು ಭಾನುವಾರ “ಸಾಮೂಹಿಕ ಸತ್ಯನಾರಾಯಣ ಪೂಜೆ” ಜರುಗಲಿದೆ ಎಂದು ಕಲಾಶ್ರೀ ಮಿತ್ರ ಬಳಗದ ಪ್ರಕಟನೆ ತಿಳಿಸಿದೆ.
ಬೆಳಿಗ್ಗೆ 10 ಕ್ಕೆ ಸತ್ಯನಾರಾಯಣ ಪೂಜೆ ಪ್ರಾರಂಭ ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ನಂತರ ಅನ್ನ ಸಂತರ್ಪಣೆ ಜರುಗಲಿದೆ.

