ಮಂಗಳೂರು: ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ನಿಷ್ಠೆ ಮತ್ತು ಗುರಿ ಇದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಒಳ್ಳೆಯ ಸುತ್ತಮುತ್ತಲಿನ ಉತ್ತಮ ಪರಿಸರವು ನಮ್ಮ ಉತ್ತಮ ಬದುಕಿಗೆ ದಾರಿಯಾಗುತ್ತದೆ. ಜೀವನದಲ್ಲಿ ಒಬ್ಬ ವ್ಯಕ್ತಿ ಮಂದೆ ಬರಬೇಕಾದರೆ ಜನ್ಮಕೊಟ್ಟಂತಹ ತಂದೆತಾಯಿ, ವಿದ್ಯೆಕೊಟ್ಟಂತಹ ಗುರುವಿನ ಆಶೀರ್ವಾದ ಇರಬೇಕು. ಈ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಈ ಮೂರು ವ್ಯಕ್ತಿಗಳನ್ನು ತನ್ನ ಜೀವಿತಾವಧಿಯಲ್ಲಿ ಎಂದು ಮರೆಯಬಾರದು ಎಂದು ತುಳುನಾಡ ಚಕ್ರವರ್ತಿಕಿಂಗ್ ಆ್ಯಕ್ಷನ್ ಬಿರುದಾಂಕಿತ ಚಲನಚಿತ್ರ ನಟ ಅರ್ಜುನ್ ಡಿ. ಕಾಪಿಕಾಡ್ ನುಡಿದರು.

jyoti-2

ಇವರು ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್ ಯು.ಎಸ್. ಎ. ಮಂಗಳಜ್ಯೋತಿ, ವಾಮಂಜೂರು ಇದರ ಆಶ್ರಯದಲ್ಲಿ ಪೋಷಕತ್ವ ಹೊಂದಿರುವ ಮಕ್ಕಳ ಸಾಂಸ್ಕೃತಿಕ ಸಮ್ಮಿಲನ 2016 ವಾಮಂಜೂರಿನ ಪಾರ್ವತಿ ಬಾಬು ಶೆಟ್ಟಿ ಸಭಾಂಗಣದಲ್ಲಿ ಜಾನಪದ ಶೈಲಿಯಲ್ಲಿ ಕಲಸೆಗೆ ಭತ್ತ ತುಂಬುವುದರ ಮೂಲಕ ಮತ್ತು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪೋಷಕತ್ವವನ್ನು ಹೊಂದಿರುವ ಮಕ್ಕಳಿಗೆ ಅಂತರ್ಗತವಾದ ಪ್ರತಿಭೆಯನ್ನು ಹೊರತರಲು ಸಮ್ಮಿಲನ 2016 ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಕಾರ್ಯಕ್ರಮ ಆಯೋಜಕ ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್ ಯು.ಎಸ್. ಎ ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಯೋಜನಾಧಿಕಾರಿ ಪುನೀತ್ ಡಿ ಶೆಟ್ಟಿ ತಿಳಿಸಿದರು.

ಕಲಾವಿದರಾಗಿ ಹುಟ್ಟುವುದೇ ಪುಣ್ಯ. ಆದರೆ ಅದಕ್ಕೆಲ್ಲದಕ್ಕೂ ಮುಖ್ಯ ಪೂರ್ವಜನ್ಮದ ಪುಣ್ಯ ಮತ್ತು ಜನರ ಸಹಕಾರ. ಪ್ರತಿಯೊಂದು ಮಕ್ಕಳಲ್ಲಿಯೂ ಒಂದೊಂದು ಪ್ರತಿಭೆ ಇದೆ. ಇತ್ತೀಚಿನ ದಿನದಲ್ಲಿ ಪ್ರತಿಭೆಯನ್ನು ಹೊರ ಹಾಕುವುದಕ್ಕೆ ಅವಕಾಶಗಳೂ ಕಡಿಮೆಯಾಗುತ್ತಿದೆ. ಸಮ್ಮಿಲನದಂತಹ ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಸಾಧ್ಯ. ನಮ್ಮ ಜೀವನದಲ್ಲಿ ಸಿಕ್ಕ ಸಮಯವನ್ನು ಉತ್ತಮ ಕೆಲಸಕ್ಕೆ ವಿನಿಯೋಗಿಸಿ ಸಮಾಜ ಮೆಚ್ಚುವಂತಹ ವ್ಯಕ್ತಿಗಳು ನಾವಾಗಬೇಕೆಂದು ಎಂದು ಲೀಡ್ಸ್‍ಗ್ರೂಪ್ ಮಂಗಳೂರು ಲಯನ್ ಕಿಶೋರ್ ಡಿ. ಶೆಟ್ಟಿ ಇವರು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದರು.

jyoti

ಸ್ನೇಹಿತರು ಬಂಧುಗಳಾಗುವುದು, ಬಂಧುಗಳು ಸ್ನೇಹಿತರಾಗುವುದು ನಮ್ಮ ಭಾಗ್ಯ. ಯಾವುದೇ ಕೆಲಸದಲ್ಲಿ ತನ್ಮಯತೆ ಮತ್ತು ಪ್ರೀತಿ ಇದ್ದರೆ ಯಶಸ್ಸು ಇರುತ್ತದೆ. ಕಲಾವಿದನಿಗೆ ಕಲೆಯೇ ಬದುಕು. ಕಲೆಯಲ್ಲಿ ತಲ್ಲೀನನಾದ ಕಲಾವಿದನ ಬದುಕಿನಲ್ಲಿ ಕ್ಷಣದಿಂದ ಕ್ಷಣಕ್ಕೆ ಸುಖವನ್ನು ಅನುಭವಿಸುತ್ತಾನೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎ. ರಾಜೇಂದ್ರ ಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ಟಾಟ ವೆಸ್ಟ್ ಸೈಡ್‍ಯೋಜನೆಗೆ ನೀಡಿದ 3 ಟ್ರಾವೆಲ್ ಬ್ಯಾಗ್‍ನ್ನು ನೀಡಲಾಯಿತು. ಅಲ್ಲದೆ 10ನೇ, ಪಿ.ಯು.ಸಿ., ಡಿಗ್ರಿಯಲ್ಲಿ ಅತ್ಯಧಿಕ ಅಂಕವನ್ನು ಪಡೆದ ಪೋಷಕತ್ವ ಹೊಂದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯಿನಿ ಮಾರ್ಯೇಟ್ ಮಸ್ಕರೇನಸ್, ಐ.ಟಿ.ಐ. ಪಾಂಶುಪಾಲ ನರೇಂದ್ರ, ದಿಗಂತ ಯುವಕ ಸಂಘದ ಪದಾಧಿಕಾರಿಗಳಾದ ಪ್ರತೋಷ್ ಮತ್ತು ಅಶ್ವಿನಿ ಉಪಸ್ಥಿತರಿದ್ದರು. ರಮ್ಯ ನಿರೂಪಿಸಿದರು, ಮುಖ್ಯೋಪಾಧ್ಯಯ ಆಶೋಕ್‍ಕುಮಾರ್ ಶೆಟ್ಟಿ ವಂದಿಸಿದರು. ಲೀಲಾವತಿ, ಹರೀಶ್ ಕುಲಶೇಖರ ಸಹಕರಿಸಿದರು.

ಸಭಾ ಕಾರ್ಯಕ್ರಮದ ನಂತರ ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್ ಯು.ಎಸ್. ಎ. ಮಂಗಳ ಜ್ಯೋತಿ ಸಮಗ್ರ ಶಾಲೆಯಲ್ಲಿ ಪೋಷಕತ್ವವನ್ನು ಹೊಂದಿರುವ ಮಕ್ಕಳ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

By suddi9

Leave a Reply

Your email address will not be published. Required fields are marked *