ಮಂಗಳೂರು: ರಾಜ್ಯದಲ್ಲಿ 7860 ಸ್ಲಂ ಗಳಿದ್ದು,ಅವುಗಳ ಸ್ಥಿತಿ ಗತಿಗಳ ಸಮೀಕ್ಷೆ ಆರಂಭಗೊಂಡಿದೆ ಅದೇ ರೀತಿ 4000 ಹೆಚ್ಚು ಅನಧಿಕೃತ ಸ್ಲಂಗಳಿವೆ. ಅವುಗಳ ಸಮೀಕ್ಷೆ ನಡೆಯಬೇಕಿದೆ. ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಘಟಕವು ಸಮೀಕ್ಷೆಗಳನ್ನು ಶೀಘ್ರದಲ್ಲಿ ಮುಗಿಸಿ ಪಕ್ಷದ ರಾಜಾಧ್ಯಕ್ಷರಿಗೆ ವರದಿ ಸಲ್ಲಿಸಲಿದೆಎಂದು ಮೋರ್ಚಾದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

morcha-2

ಅವರು ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಸ್ಲಂ ಮೋರ್ಚಾ ಪದಗ್ರಹಣ ಮತ್ತು ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಮೂಲಭೂತ ಸೌಕರ್ಯಗಳ ನೆಲೆಯಲ್ಲಿ ಸ್ಲಂ ಮೋರ್ಚಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದ ರೆಡ್ಡಿ ರಾಜ್ಯ ಸರ್ಕಾರ ಬಡವರ ಮತ್ತು ಕೂಲಿ ಕಾರ್ಮಿಕರ ಶ್ರೇಯಸ್ಸನ್ನು ಮರೆತಿದೆ. ಸ್ಲಂಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕೇಂದ್ರದಿಂದ ದೊರೆತ ಅನುದಾನ ಖರ್ಚಾಗದೇ ವಾಪಸ್ ಹೋಗಿದೆ ಈ ಬಾರಿ ಬಿಡುಗಡೆಯಾದ 600 ಕೋಟಿಯಲ್ಲಿ ಚಿಕ್ಕಾಸು ಕೂಡಾ ಖರ್ಚಾಗಿಲ್ಲ ಎಂದರು.

slum

ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರು ಮಾತನಾಡಿ ದ.ಕ ಜಿಲ್ಲೆಗೆ ಮೊದಲ ಬಾರಿಗೆ ಸ್ಲಂ ಮೋರ್ಚಾ ಕಾಲಿಟ್ಟಿದೆ. ದ.ಕ.ಜಿಲ್ಲಾಧ್ಯಕ್ಷರಾಗಿ ಹಿರಿಯರಾದ ರಮಾ ಅಮೀನ್ ಪಚ್ಚನಾಡಿ ಇವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ತುಪ್ಪೆಕಲ್ಲು ಹಾಗೂ ಚೇತಕ್ ಪೂಜಾರಿಯನ್ನು ಆಯ್ಕೆ ಮಾಡಿದ್ದಾರೆ. ತುಂಬಾ ಖುಷಿಯಾಗಿದೆ ಜಿಲ್ಲಾಧ್ಯಕ್ಷರು ಹಾಗೂ ಇವರ ಇಡೀ ತಂಡ ಅಲ್ಪ ಅವಧಿಯಲ್ಲಿ ನಾಲ್ಕೈದು ಮಂಡಲಗಳ ರಚನೆ ಸಂಪೂರ್ಣಗೊಂಡಿದೆ. ಇದು ಸುಲಭದ ಕೆಲಸ ಅಲ್ಲ.ರಾಮ ಅಮೀನ್ ನನ್ನ ತುಂಬಾ ಆತ್ಮೀಯರು ಇವರಿಗೆ ಯಾವ ಹುದ್ದೆ ಕೊಟ್ಟರೂ ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸುವವರು ಎಂದು ಹೇಳಿದರು.

morcha

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರು, ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷರಾದ ರಮಾ ಅಮೀನ್, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವೇದವಾಸ ಕಾಮತ್, ಸ್ಲಂ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ತುಪ್ಪೆಕಲ್ಲು , ಚೇತಕ್ ಪೂಜಾರಿ, ದ.ಸ್ಲಂ ಮೋರ್ಚಾ ಪ್ರವೀಣ್ ಕುಮಾರ್ ಕೊಡಿಯಾಲಬೈಲ್, ವೇದಿಕೆಯಲ್ಲಿದ್ದರು.

By suddi9

Leave a Reply

Your email address will not be published. Required fields are marked *