ಬಂಟ್ವಾಳ : ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂಬ ಘೋಷಣೆಯಂತೆ ಪಜೀರು ಗ್ರಾಮ ಪಂಚಾಯತ್ ಮತ್ತು ಪ್ರಜ್ಞಾ ಸಲಹಾ ಕೆಂದ್ರ ಕಂಕನಾಡಿ ಮಂಗಳೂರ್ ಇದರ ಆಶ್ರಯದಲ್ಲಿ ೨೦೧೬-೧೭ ನೇ ಸಾಲಿನ ಮಕ್ಕಳ ಹಕ್ಕಿನ ವಿಶೇಷ ಗ್ರಾಮಸಭೆ ಯನ್ನು ಸೆಂಟ್ರಲ್ ಮುಸ್ಲಿಂ ಹಿರಿಯ ಪ್ರಾಮಿಕ ಶಾಲೆ ಮಲಾರ್ ಪದವಿನಲ್ಲಿ ಆಯೋಜಿಸಲಾಯಿತು.
ಮಲಾರ್ ಪದವು ಶಾಲೆಯ ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಸಭೆ ಆರಂಭಿಸಲಾಯಿತು. ಪಂಚಯತ್ ಅಭಿವೃದ್ಧಿ ಅಧಿಕಾರಿ ಸ್ಮೃತಿ ಸ್ವಾಗತಿಸಿ ಕಳೆದ ಗ್ರಾಮಸಭೆಯ ವರದಿ ಮಂಡಿಸಿದರು. ಗ್ರಾಮದ ಬೇರೆ ಬೇರೆ ಶಾಲೆಗಳಿಂದ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದು ಶಾಲೆ ಹಾಗೂ ಊರಿನ ಕುಂದು ಕೊರತೆಗಳನ್ನು ಸಭೆಯ ಮುಂದೆ ವ್ಯಕ್ತ ಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಶೆಟ್ಟಿ ರವರು ಆದ್ಯತೆಯ ಮೇರೆಗೆ ಎಲ್ಲಾ ಸಮಸ್ಯೆ ಗಳನ್ನು ಬಗೆಹರಿಸುವುದಾಗಿ ತಿಳಿಸಿದರು.
ಕುರ್ನಾಡು ಪ್ರಾಥಮಿಕ ಕೆಂದ್ರ ದ ವೈದ್ಯ ರಾದ ಡಾ / ಅರವಿಂದರವರು ಆರೋಗ್ಯ ಇಲಾಖೆ ವತಿಯಿಂದ ಮಕ್ಕಳಿಗೆ ಸಿಗುವ ಸೌಲಭ್ಯ ಗಳ ಬಗ್ಗೆ ಮಾಹಿತಿ ನೀಡಿದರು. ಪ್ರಜ್ಞಾ ಸಲಹಾ ಕೆಂದ್ರದ ವಲಯ ಸಂಯೋಜಕ ಪ್ರದೀಪ ಕಾಮತ್ , ಗ್ರಾಮ ಪಂಚಾಯತ್ ಸದಸ್ಯರು ,ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆ, ಉಪಸ್ಥಿತ ರಿದ್ದರು. ಪ್ರಜ್ಞಾ ಸಲಹಾ ಕೆಂದ್ರದ ಸಂಪನ್ಮೂಲ ಅಧಿಕಾರಿ ಸುನೀತಾ ನಾಯ್ಕ್ ರವರು ಕಾರ್ಯಕ್ರಮ ನಿರ್ವಹಿಸಿದರು . ಶಾಲಾ ಮುಖ್ಯ ಶಿಕ್ಷಕ ಮಹಮ್ಮದ್ ರವರು ಧನ್ಯವಾದ ಗೈದರು.

