ವಿಟ್ಲ: ಕಾಶಿಮಠದ ಶ್ರೀಕಾಶಿ ಯುವಕ ಮಂಡಲದ ರಜತ ವರ್ಷಾಚರಣೆಯ ನೂತನ ಕಟ್ಟಡ ನಿರ್ಮಾಣದ ಒಂದು ವರ್ಷದ ಸವಿ ನೆನಪಿಗಾಗಿ, ವಿಟ್ಲ ಕಾಶಿಮಠ ರುದ್ರ ಭೂಮಿಯಲ್ಲಿ ಮರಣ ಹೊಂದಿದ ದೇಹದ ದಹಣ ಕಾರ್ಯಕ್ಕೆ ಜಾಗ ಇಲ್ಲದಿರುವುದರಿಂದ ಕಾಶಿಮಠದ ದಿ| ಕೃಷ್ಣ (ಪುಟ್ಟಣ್ಣ) ಭಟ್ ರವರ ನೆನಪಿಗಾಗಿ ಅವರ ಮನೆಯವರು ನೀಡಿದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಕಾಶಿಮಠದ ಈಶ್ವರ ಭಟ್ ನೆರವೇರಿಸಿದರು.

smaranartha

ಶಂಕುಸ್ಥಾಪನೆ ನೆರವೇರಿಸಿದ ಈಶ್ವರ ಭಟ್ ರವರು `ಕಾಶಿಮಠದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀಕಾಶಿ ವಿಶ್ವನಾಥ ದೇವಸ್ಥಾನದ ಬ್ರಹ್ಮಕಲಶವು ಜೂನ್ ತಿಂಗಳಲ್ಲಿ ನೆರವೇರುವುದು. ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಶಿ ಯುವಕ ಮಂಡಲದ ಗೌರವಾಧ್ಯಕ್ಷ ಬಾಬು ಕೆ ವಿ, ಅಧ್ಯಕ್ಷ ತಾರಾನಾಥ ಕಬ್ಬಿನಹಿತ್ಲು, ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *