ಮುಂಬಯಿ: ಬಿಎಸ್‍ಕೆಬಿ ಅಸೋಸಿಯೇಶನ್, ಗೋಕುಲ, ಸಾಯನ್ ಅಲ್ಲಿನ ಯುವ ವಿಭಾಗವು ಪ್ರತಿವರ್ಷದಂತೆ ಮಕ್ಕಳ ದಿನಾಚರಣೆಯನ್ನು ಗೋಕುಲದಲ್ಲಿ ಆಯೋಜಿಸಿತ್ತು. ಯುವ ವಿಭಾಗಧ್ಯಕ್ಷ ಹರಿದಾಸ್ ಭಟ್ ಅವರು ಕಾರ್ಯಕಾರೀ ಸಮಿತಿ ಸದಸ್ಯರನ್ನೊಳಗೊಂಡು ಮಕ್ಕಳೊಂದಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

child-2

15 ವರ್ಷದವರೆಗಿನ ಮಕ್ಕಳಿಗಾಗಿ ಆರೋಗ್ಯವಂತ ಮಗು, ಗುರಿ ಎಸೆತ, ಶ್ಲೋಕ ಪಠನೆ, ಚಿತ್ರಕಲೆ, ರಸ ಪ್ರಶ್ನೆ, ನೃತ್ಯ, ಛದ್ಮವೇಷ ಮುಂತಾದ ಸ್ಪರ್ಧೆಗಳನ್ನು ಯುವ ವಿಭಾಗವು ಅತ್ಯಂತ ಶಿಸ್ತಿನಿಂದ ಆಯೋಜಿಸಿತ್ತು. ಡಾ| ಅರುಣ್ ರಾವ್, ಡಾ| ವಸಂತಾ ನಾಯರ್, ಎನ್‍ಕೆಇಎಸ್ ಶಾಲೆಯ ಶಿಕ್ಷಕರಾದ ಸಂಧ್ಯಾ ಸಾಗರ್, ತಮರೈಸೆಲ್ವಿ, ಕೃಷ್ಣಾ ಸುರ್ವಡೆ, ಅಮಿತಾ ಕೆ., ಕಲಾವತಿ ನಾಯ್ಡು ಮತ್ತು ಶಿವಯೋಗಿ ಸಣ್ಣಮನಿಯವರು ತೀರ್ಪುಗಾರರಾಗಿ ಸಹಕರಿಸಿದ್ದು,ಬಹುಮಾನ ವಿತರಣಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಸೋಸಿಯೇಶನ್‍ನ ಉಪಾಧ್ಯಕ್ಷ ವಾಮನ್ ಹೊಳ್ಳರವರು ತೀರ್ಪುಗಾರರಿಗೆ ಸ್ಮರಣಿಕೆಗಳನ್ನಿತ್ತು ಗೌರವಿಸಿದರು.

child-3

ವಾಮನ್ ಹೊಳ್ಳ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ, ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿ ಇದೇ ಡಿಸೆಂಬರ್‍ನಲ್ಲಿ ಜರಗಲಿರುವ ಚಿಣ್ಣರ ಚಳಿಗಾಲದ ಶಿಬಿರದಲ್ಲಿ ಹೆಚ್ಚಿನ ಮಕ್ಕಳು ಭಾಗವಹಿಸುವಂತೆ ಪಾಲಕರು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಶೈಲಿನಿ ರಾವ್, ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಹರಿದಾಸ್ ಭಟ್, ಯುವ ವಿಭಾಗದ ಸಂಚಾಲಕಿ ವಿನೋದಿನಿ ರಾವ್ ಉಪಸ್ಥಿತರಿದ್ದರು.

chidrensday

ಇದೇ ಸಂದರ್ಭದಲ್ಲಿ, ಕಳೆದ 3 ವರ್ಷಗಳಲ್ಲಿ ಹಲವಾರು ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹಾಗೂ ಭಜನೆಯ ಹಾಡುಗಳ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಎರಡನೆಯ ಬಹುಮಾನವನ್ನು ಪಡೆದ ಬಾಲಕಲಾವೃಂದದ ಚಿಣ್ಣರಿಗೆ ಪುರಸ್ಕಾರಗಳನ್ನೀಯಲಾಯಿತು. ಗೋಕುಲ ಕಲಾವೃಂದದ ಅಧ್ಯಕ್ಷ ಪ್ರಶಾಂತ್ ಹೆರ್ಲೆ ಕಾರ್ಯಕ್ರಮ ನಿರ್ವಹಿಸಿದರು. ವಿನೋದಿನಿ ರಾವ್ ಧನ್ಯವದಿಸಿದರು.

By suddi9

Leave a Reply

Your email address will not be published. Required fields are marked *