ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ಪ್ರವರ್ತಿತ ಆರೂ ದಶಾವತರ ಯಕ್ಷಗಾನ ಮೇಳಗಳ ಆರಂಭದ ಸೇವೆಯಾಟ ಗುರುವಾರ ಜರಗಿತ್ತು.

23-vm-kateelu-mela-1

ಧಾರ್ಮಿಕ ಪ್ರಕ್ರಿಯೆಗಳ ಬಳಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ಕಲಾವಿದರಿಗೆ ಗೆಜ್ಜೆ ಪ್ರಧಾನ ಮಾಡಿದರು. ಆರು ಮೇಳಗಳ ಹನ್ನೆರಡು ಜನ ಕಲಾವಿದರು ಗೆಜ್ಜೆಕಟ್ಟಿ ಎಲ್ಲಾ ಮೇಳಗಳ ಮುಖ್ಯ ಭಾಗವತರ ಗಾಯನ ಹಿಮ್ಮೇಳ ವಾದನದೊಂದಿಗೆ ದೇವಿಯ ಗರ್ಭಗುಡಿ ಎದುರು ಹಾಗೂ ಗಣಪತಿ ಸನ್ನಿಧಿಯಲ್ಲಿ ಯಕ್ಷನಾಟ್ಯ ಸೇವೆಗೈದರು.

ಮೇಳದ ದೇವರ ಪೆಟ್ಟಿಗೆ ಸಹಿತ ದೇವರಿಗೆ ಪ್ರದಕ್ಷಿಣಿಗೈದು ಚೌಕಿಗೆ ತೆರಳಿ ಸರಸ್ವತೀ ಸದನದಲ್ಲಿ ಅಲಂಕೃತ ಆರು ಮಂಟಪಗಳಲ್ಲಿ ಮೇಳದ ದೇವರುಗಳ ಪೂಜೆ ನಡೆುತು ನಂತರ ಆರು ರಂಗಸ್ಥಳಗಳಲ್ಲಿ ಏಕಲಾಲದಲ್ಲಿ ದೇವರ ಪೂಜೆ ಹಾಗೂ ಯಕ್ಷಗಾನದ ವಿಜೃಂಭನೆ ನೋಡುಗರಿಗೆ ವಿಶೇಷ ಅನುಭವ.

ಅನುವಂಶಿಕ ಅರ್ಚಕ ಹಾಗೂ ಮೊಕ್ತೇಸರ ವಾಸುದೇವ ಅಸ್ರಣ್ಣ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ವೆಂಕಟರಮಣ ಅಸ್ರಣ್ಣ, ಕಮಲಾದೇವಿಪ್ರಸಾದ ಅಸ್ರಣ್ಣ, ಹರಿನಾರಾಯಣದಾಸ ಅಸ್ರಣ್ಣ ಅನುವಂಶಿಕ ಮೊಕ್ತೇಸರ ಡಾ.ಕೆ.ರವೀಂದ್ರನಾಥ ಪೂಂಜಾ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಯಕ್ಷಧರ್ಮ ಬೋನೀ ಚಾರಿಟೇಬಲ್ ಟ್ರಸ್ಟ್ ಪದಾಕಾರಿಗಳು ಸೇವಾಕರ್ತರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ‘ಪಾಂಡವಾಶ್ವಮೇಧ’ ಯಕ್ಷಗಾನ ಪ್ರದರ್ಶನಗೊಂಡಿತು.

By suddi9

Leave a Reply

Your email address will not be published. Required fields are marked *