ನವದೆಹಲಿ: ಕಪ್ಪು ಹಣ ಮತ್ತು ಭಯೋತ್ಪಾದನೆ ಕಡಿವಾಣ ಹಾಕುವ ದೃಷ್ಟಿಯಿಂದ ಇಂದು ಮಧ್ಯರಾತ್ರಿಯಿಂದಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನ ಮಧ್ಯರಾತ್ರಿಯಿಂದಲೇ ಬಂದ್ ಮಾಡಿರುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ಧಾರೆ. ಕಪ್ಪು ಹಣ ಭಯೋತ್ಪಾದನೆ ಹೆಚ್ಚುತ್ತಿದೆ. ಎಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರದ ಎಲ್ಲಾ ಕಛೇರಿಗೆ ಹಣ ವಿನಿಮಯ, ನಾಳೆ ಸರ್ಕಾರಿ ಬ್ಯಾಂಕ್ ಕಾರ್ಯ ನಿರ್ವಹಿಸಲ್ಲ. ಆನ್ ಲೈನ್, ವ್ಯವಹಾರದಲ್ಲಿ ಯಾವುದೇ ತೊಂದರೆಯಿಲ್ಲ. ಎಟಿಮ್ ನಾಳೆ ಬಂದ್ ಯಾವುದೇ ರೀತಿಯ ವ್ಯವಹಾರವಿರುವುದಿಲ್ಲ. 2000 ರೂ. ಮಾತ್ರ ಹಣ ಡ್ರಾ ಮಾಡ್ಕೊಳ್ಳಬಹುದು.
ಘೋಷಣೆಗಳು:
1.500, 1000 ರೂ. ನೋಟುಗಳ ಮುದ್ರಣ ಬಂದ್
2. ಇಂದು ಮಧ್ಯರಾತ್ರಿಯಿಂದಲೇ ನೋಟು ಬಂದ್
3.ನೋಟುಗಳನ್ನು ವಾಪಸ್ ನೀಡಲು 50 ದಿನ ಗಡುವು
4. 50 ದಿನಗಳ ಒಳಗಾಗಿ ನೋಟುಗಳನ್ನು ಬ್ಯಾಂಕ್ಗೆ ನೀಡಿ
5. ಕಪ್ಪು ಹಣದ ವಹಿವಾಟು ತಡೆಯಲು ಕೇಂದ್ರದ ಹೆಜ್ಜೆ
6.ಕಪ್ಪು ಹಣದ ವಿರುದ್ಧ ಕೇಂದ್ರದ ಕೊನೆಯ ಅಸ್ತ್ರ
7. ಬ್ಯಾಂಕ್, ಪೋಸ್ಟ್ ಆಫೀಸ್ನಲ್ಲಿ ನೋಟು ಬದಲಿಸಿಕೊಳ್ಳಿ
8. ಖೋಟಾ ನೋಟುಗಳ ವಹಿವಾಟು ಉಗ್ರರಿಗೆ ಲಾಭವಾಗುತ್ತಿದೆ
9. ಗುರುತಿನ ಪತ್ರ ನೀಡಿ, ನೋಟುಗಳನ್ನು ವಾಪಸ್ ಮಾಡಿ
10 ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ತೋರಿಸಿ ಬದಲಿಸಿಕೊಳ್ಳಿ
11.ಮತದಾರರ ಗುರುತಿನ ಪತ್ರ ತೋರಿಸಿ ಬದಲಿಸಿಕೊಳ್ಳಿ
12. 500, 1000 ರೂ. ನೋಟು ಇನ್ನು ಮುಂದೆ ಇರಲ್ಲ
13. ಕಪ್ಪುಹಣದ ವಿರುದ್ಧ ಪ್ರಧಾನಿ ಮೋದಿ ಬ್ರಹ್ಮಾಸ್ತ್ರ
14. ನವೆಂಬರ್ 09, 10ರಂದು ಎಟಿಎಂ ಮೆಷಿನ್ ಕೆಲಸ ಮಾಡಲ್ಲ
15.ನಾಳೆ, ನಾಳಿದ್ದು ಎಟಿಎಂ ಮೆಷಿನ್ ಇರುವುದಿಲ್ಲ
16. ನಾಳೆ, ನಾಳಿದ್ದು ಎಟಿಎಂಗೆ ಹೋದರೂ ಹಣ ಸಿಗಲ್ಲ
17.ಬ್ಯಾಂಕ್ನಲ್ಲಿ ನಗದು ರಹಿತ ವಹಿವಾಟಿಗೆ ತೊಂದರೆ ಇಲ್ಲ
18. ತಕ್ಷಣದಿಂದಲೇ 500, 1000 ರೂ. ವಹಿವಾಟು ಬಂದ್
19. ನೋಟು ವಾಪಸ್ ನೀಡಲು ಡಿಸೆಂಬರ್ 30 ಡೆಡ್ಲೈನ್
20. ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಹಣ ವಿನಿಮಯ
21. 100, 50, 20, 10, 5 ರೂ. ಮಾತ್ರವೇ ಕಾನೂನುಬದ್ಧ
22. 500, 1000 ರೂ. ನೋಟುಗಳಿಗೆ ಇನ್ನು ಮುಂದೆ ಮಾನ್ಯತೆ ಇಲ್ಲ
23. ಎಟಿಎಂನಲ್ಲಿ ಪ್ರತಿದಿನ 2 ಸಾವಿರ ಮಾತ್ರ ಹೊರತೆಗೆಯಬಹುದು
24. ನವೆಂಬರ್ 9ರಂದು ಎಲ್ಲ ಬ್ಯಾಂಕ್ಗಳೂ ತೆರೆದಿರುತ್ತವೆ
25.ಪೆಟ್ರೋಲ್ ಬಂಕ್, ಗ್ಯಾಸ್ ಬಂಕ್ಗಳಲ್ಲೂ ಹಣ ಬದಲಾಯಿಸಿಕೊಳ್ಳಿ
26. ಸಾವಿರ ನೋಟು ಚಲಾವಣೆಗೆ ಆರ್ಬಿಐ ಒಪ್ಪಿದೆ
27.ಮುಂದಿನ ದಿನಗಳಲ್ಲಿ 2 ಸಾವಿರ ರೂ. ನೋಟು ಚಲಾವಣೆಗೆ ಬರಲಿದೆ
28.ಏಪ್ರಿಲ್ 2017ರ ಬಳಿಕ ಹೊಸ ನೋಟುಗಳು ಚಲಾವಣೆಗೆ ಬರಲಿವೆ
29. ಸ್ವಲ್ಪ ದಿನಗಳ ಬಳಿಕ ಹೊಸ 500, 2000 ನೋಟು ಬರಲಿವೆ

