ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ವತಿಯಿಂದ ಪ್ರಥಮ ವರ್ಷದ ಏಕಾಹ ಭಜನಾ ಮಹೋತ್ಸವವು ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಜರಗಲಿದೆ. ನ.26ರಂದು ಶನಿವಾರ ಸೂರ್ಯೋದಯದಿಂದ ಮರುದಿನ ಭಾನುವಾರ ಸೂರ್ಯೋದಯದವರೆಗೆ ನಾನಾ ಭಜನಾ ಮಂಡಳಿಯ ತಂಡಗಳು ಈ ಭಜನೋತ್ಸವದಲ್ಲಿ ಭಾಗವಹಿಸಲಿದೆ.
ಇದೇ ಸಂದರ್ಭದಲ್ಲಿ ದೇವಳದ ವತಿಯಿಂದ ಲೋಕ ಕಲ್ಯಾಣರ್ಥವಾಗಿ ಕಾಲಾಮೃತ್ಯುಂಜಯ ಹೋಮ ಜರಗಲಿದೆ ಎಂದು ದೇವಳದ ಆಡಳಿತ ಮಂಡಳಿ ಹಾಗೂ ಓಂಕಾರ ಭಜನಾ ಮಂಡಳಿ ಪೊಳಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಶ್ರೀ ಕ್ಷೇತ್ರದಲ್ಲಿ ಪ್ರತೀ ಸೋಮವಾರ 6.30ರಿಂದ 8ರವರೆಗೆ ನಡೆಯುವ ಭಜನಾ ಕಾರ್ಯಕ್ರಮವನ್ನು ಸೇವಾ ರೂಪದಲ್ಲಿ ನಡೆಸಲಾಗುತ್ತದೆ.
ವಿ.ಸೂ: ಸೇವಾ ರೂಪದಲ್ಲಿ ಭಜನೆ ಮಾಡಿಸುವವರು ಓಂಕಾರ ಭಜನಾ ಮಂಡಳಿಯನ್ನು ಸಂಪರ್ಕಿಸಬಹುದು.
Contact No: 9972492577

