ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಧಾರ್ಮಿಕ ಸಮಿತಿ ಮಾಜಿ ಕಾರ್ಯಧ್ಯಕ್ಷ, ಖಾರ್ ಪೂರ್ವದ ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‍ನಗರ್‍ನ ಪಹೇಲ್ವಾನ್ ಚಾಳ್‍ನಲ್ಲಿನ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಉಪಾಧ್ಯಕ್ಷ, ಬಾಂದ್ರ ಪೂರ್ವದ ಕಲಾನಗರ್ ಅಲ್ಲಿನ ಉಜಲಾ ಹೊಟೇಲ್‍ನ ಮಾಲೀಕ, ಹೆಸರಾಂತ ಸಮಾಜ ಸೇವಕ ದೇವೆಂದ್ರ ವಿ. ಬಂಗೇರಾ ಇವರ ಸುಪುತ್ರ, ಯುವ ಹೊಟೇಲು ಉದ್ಯಮಿ ದರ್ಶನ್ ಡಿ.ಬಂಗೇರಾ ಅ.25ರಂದು  ಕಳೆದ ಬುಧವಾರ ಹೃದಯಾಘಾತದಿಂದ ನಿಧನರಾದರು.

darshan

ಮೂಲ್ಕಿ ಹೆಜಮಾಡಿ ಮೂಲದವರಾದ ದೇವೆಂದ್ರ ಬಂಗೇರಾ ಇವರ ದ್ವಿತೀಯ ಪುತ್ರ ದರ್ಶನ್ ಬುಧವಾರ ಸಂಜೆ ವಿೂರಾರೋಡ್ ಪೂರ್ವದಲ್ಲಿ ರಿಕ್ಷಾದಲ್ಲಿ ಸಾಗುತ್ತಿರುವ ವೇಳೆ ತೀವ್ರ ಹೃದಯಾಘಾ ತಕ್ಕೊಳಗಾಗಿದ್ದು ಪ್ರಯಾಣಿಕ ದರ್ಶನ್ ಗಂಭೀರ ಸ್ಥಿತಿಗತಿ ಅರಿತ ರಿಕ್ಷಾ ಚಾಲಕ ತನ್ನ ಆಟೋ ತತ್‍ಕ್ಷಣ ಸ್ಥಳಿಯ ಕನಕೀಯ ಪೊಲೀಸ್ ಠಾಣೆಗೆ ಒಯ್ದು ಮಾಹಿತಿ ನೀಡಿದರು ಎನ್ನಲಾಗಿದೆ. ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತರಾಗಿದ್ದು, ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ದರ್ಶನ್ ಮೃತದೇಹವನ್ನು ಬಾಂದ್ರಾ ಪೂರ್ವದ ನಿರ್ಮಲ್ ನಗರ್ ಅಲ್ಲಿನ ಸಾಯಿಕೃಪಾ ಹೌಸಿಂಗ್ ಸೊಸೈಟಿ ನಿವಾಸಕ್ಕೆ ತರಲಾಯಿತು.

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರು ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷರಾದ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಶ್ರೀ ಶನಿಮಹಾತ್ಮ ಸೇವಾ ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ, ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ ಮತ್ತಿತರ ಪದಾಧಿಕಾರಿಗಳು, ಗಣ್ಯರು, ಮಿತ್ರರು ಅಂತಿಮ ದರ್ಶನ ಪಡೆದರು. ವಾಸುದೇವ ಆರ್.ಕೋಟ್ಯಾನ್ ಹೆಜ್ಮಾಡಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮೃತರು ಮಾತಾ-ಪಿತರು, ಓರ್ವ ಸಹೋದರ ಮತ್ತು ಸಹೋದರಿ ಸೇರಿದಂತೆ ಅಪಾರ ಬಂಧು, ಮಿತ್ರಬಳಗವನ್ನು ಅಗಲಿದ್ದು ಅಪರಾಹ್ನ ಬಾಂದ್ರ ಪೂರ್ವದ ಟೀಚರ್ಸ್ ಕಾಲೋನಿ ಅಲ್ಲಿನ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

By suddi9

Leave a Reply

Your email address will not be published. Required fields are marked *