Published On: Tue, Oct 25th, 2016

ಕನಸಿನ ಕನವರಿಕೆ..

ಕನಸು ಯಾರಿಗೆ ಬೀಳುವುದಿಲ್ಲ ಹೇಳಿ. ಕನಸು ಕಾಣದ ಕಣ್ಣುಗಳೇ ಇಲ್ಲ. ಕಾಮನಬಿಲ್ಲಿನಂತ ಬಣ್ಣ ಬಣ್ಣದ ಕನಸುಗಳು ಕಪ್ಪು-ಬಿಳುಪು ಕಣ್ಣುಗಳಲ್ಲಿ ಮಿಂಚುತ್ತವೆ. ಕನಸು ಮಲಗಿದ್ದಾಗಲೇ ಕಾಣಬೇಕಾಗಿಲ್ಲ. ಕೂತಲ್ಲಿ ನಿಂತಲ್ಲಿ ಹಗಲು ಕನಸು ಕಾಣುವವರು ಸಾಕಷ್ಟು ಜನರು ಇದ್ದಾರೆ.

dreams

ಕೆಲವರು ಕನಸಲ್ಲೇ ಗೋಪುರ ಕಟ್ಟುತ್ತಾರೆ. ಅಕಸ್ಮಾತ್ ಆ ಗೋಪುರಕ್ಕೆ ಯಾರಾದರೂ ಕಲ್ಲೆಸೆದರೆ, ಸರ್ವವನ್ನು ಕಳೆದುಕೊಳ್ಳುತ್ತಾರೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕನಸು ಬಿದ್ದೇ ಬೀಳುತ್ತದೆ. ಕೆಲವರಿಗೆ ಕನಸಿನಲ್ಲಿ ಪ್ರೇಮಿಗಳ ಕಾಟ, ಕೆಲವರಿಗೆ ದೆವ್ವಗಳ ಕಾಟ.

ಕನಸಿಗೆ ಫೈನ್ ಹಾಕುವಂತಿಲ್ಲ. ಆದ್ದರಿಂದ ಈ ಕನಸು ಎಲ್ಲರನ್ನೂ ಬಿಡದೇ ಕಾಡುತ್ತದೆ. ಚಿತ್ರ ವಿಚಿತ್ರ ಕನಸುಗಳು ಕಣ್ಣ ಮುಂದೆ ಹಾಯುತ್ತದೆ. ನಮ್ಮ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಅಂದ ಮಾತಿನಂತೆ ಎಲ್ಲರೂ ಕನಸು ಕಾಣುತ್ತಿದ್ದಾರೆ. ಆದರೆ ಅವರು ಹೇಳಿದ ಕನಸಿಗೆ ಬೇರೆಯೇ ಅರ್ಥ.

ಕನಸು ಎಂದರೆ ಮಲಗಿದ್ದಾಗ ಬರುವ ಕನಸು ಮಾತ್ರವಲ್ಲ. ನಮ್ಮ ಮುಂದಿನ ಜೀವನ ಹೇಗಿರಬೇಕು, ನಾವು ಏನನ್ನಾದರೂ ಸಾಧಿಸಬೇಕೆಂದು ಯೋಚಿಸುವುದು ಒಂದು ರೀತಿಯ ಕನಸಾಗಿದೆ. ನಾವು ಅದೆಷ್ಟೋ ಅರ್ಥವಿಲ್ಲದ ಕನಸುಗಳನ್ನು ಕಂಡಿದ್ದೇವೆ. ಎಲ್ಲಾ ಕನಸುಗಳಿಗೆ ಅರ್ಥ ಹುಡುಕುತ್ತಿದ್ದರೆ, ತಲೆ ಹಾಳಾಗಿ ಹೋಗುತ್ತಿತ್ತು. ಆದ್ದರಿಂದ ಎಲ್ಲ ಕನಸಿನ ಅರ್ಥ ಹುಡುಕಬಾರದು. ಅರ್ಥವಾದ ಕನಸನ್ನು ಮರೆಯಬಾರದು. ಕನಸು ಕಾಣುವುದು ತಪ್ಪಲ್ಲ ಆದರೆ ಕಂಡ ಕನಸನ್ನು ನನಸಾಗಿಸದೇ ಇರುವುದು ಬಹಳ ದೊಡ್ಡತಪ್ಪು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter