ಬಜಪೆ: ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಬಡಗ ಎಡಪದವು ಮಿಜಾರು ಇದರ ಆಶ್ರಯದಲ್ಲಿ ನಮ್ಮ ಟಿವಿ ವಾಹಿನಿಯ ಸಹಯೋಗದಲ್ಲಿ ನಡೆಯುವ ಹಾಸ್ಯ ಸರಣಿಯು ಸೀಸನ್-4ರ ಎರಡನೇ ಅರ್ಹತಾ ಸುತ್ತಿನ ಪ್ರದರ್ಶನ ದೇವಳದ ಆವರಣದಲ್ಲಿ ಜರಗಿತು.
ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ, ಪ್ರೇಮಲತಾ ವಿ. ಶೆಟ್ಟಿ, ಡಾ. ಶಿವಶರಣ್ ಶೆಟ್ಟಿ, ರಘುರಾಮ್ ಶೆಟ್ಟಿ ಅವರುಗಳು ಹಾಸ್ಯ ಸರಣಿಗೆ ಚಾಲನೆ ನೀಡಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಸರಣಿ ಕಾರ್ಯಕ್ರಮ ನಿರೂಪಿಸಿದರು.



