ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಬಳಿ ರಾಮಕೃಷ್ಣ ತಪೋವನ ಆಶ್ರಮದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಅ.11ರಂದು ‘ವಿಜಯದಶಮಿ’ಯನ್ನು ಆಚರಿಸಲಾಯಿತು.


ಈ ಉತ್ಸವದ ಪ್ರಯುಕ್ತ ಆಶ್ರಮದಲ್ಲಿ ದುರ್ಗಾ ಹೋಮ, ಶ್ರೀ ಮಧುಸೂದನ್ ಇವರಿಂದ ವಿಶೇಷ ಭಜನಾ ಕಾರ್ಯಕ್ರಮ ಹಾಗೂ ನವದುರ್ಗೆಯರಾದ 9 ದೇವಿಗಳಿಗೆ ‘ಕುಮಾರಿ ಪೂಜಾ’ವನ್ನು ಸ್ವಾಮಿ ವಿವೇಕಾಚೈತನ್ಯಾನಂದ ನೆರವೇರಿಸಿದರು. ನಂತರ ಅನ್ನಪ್ರಸಾದ ವಿತರಿಸಿ, ಮಧ್ಯಾಹ್ನ ‘ಗಾಯತ್ರಿ ಹೋಮ’ ನಡೆಸಲಾಯಿತು.


ಇದೇ ದಿನ ಸಂಜೆ ಬಾಲಾಕಾಶ್ರಮದ ಮಕ್ಕಳು ನವದುರ್ಗೆಯರಂತೆ ಅಲಂಕಾರ ಮಾಡಿ, ಸ್ವಾಮೀ ವಿವೇಕಾಚೈತ್ಯಾನಂದ ಭದ್ರಕಾಳಿಯ ವೇಷವನ್ನು ಧರಿಸುವ ಮೂಲಕ ವಿಜಯದಶಮಿಯನ್ನು ರಾಮಕೃಷ್ಣ ತಪೋವನ ಆಶ್ರಮದಲ್ಲಿ ಆಚರಿಸಲಾಯಿತು.











