ಬಜಪೆ: ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಬಜಪೆ ಶ್ರೀ ಶಕ್ತಿ ಮಂಟಪದಲ್ಲಿ ಜರಗಿದ ಮೂರು ದಿನಗಳ 24ನೇ ವರ್ಷದ ಶ್ರೀ ಶಾರದೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಸೋಮವಾರ ಸಂಪನ್ನಗೊಂಡಿತು. ಸಾಂಸ್ಕೃತಿಕ ಸನ್ನಿವೇಶಗಳ ಸ್ತಬ್ಧ ಚಿತ್ರಗಳು, ಹುಲಿ ವೇಷಗಳು, ಚೆಂಡೆ-ವಾದ್ಯ ಘೋಷ, ತಾಲೀಮು, ಭಜನೆ, ಹೀಗೆ ಸಾಲಾಂಕೃತ ಮೆರವಣಿಗೆಗೆ ಬಜಪೆ ಶ್ರೀ ಶಕ್ತಿ ಮಂಟಪದಿಂದ ಹೊರಟು ಮರವೂರು ಫಲ್ಗುಣಿ ನದಿಯಲ್ಲಿ ವಿಸರ್ಜನೆಗೊಂಡಿತು.
0005222

                                                                                          ಅಲಂಕೃತಗೊಂಡ ಬಜಪೆ ಶ್ರೀ ಶಾರದೆ

11-vp-sharade

img-20161010-wa0048

ಶಿಬರೂರು ಅನಂತ ಪದ್ಮನಾಭ ಆಚಾರ್ಯರವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ಜರಗಿದವು. ಆರ್‍ಎಸ್‍ಎಸ್ ಪ್ರಮುಖರಾದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಸಮಾರಂಭಕ್ಕೆ ಭೇಟಿ ನೀಡಿದ್ದು ಸಮಿತಿಯ ವತಿಯಿಂದ ಗೌರವಿಸಲಾಯಿತು.

img-20161010-wa0047

ಶಾರದೋತ್ಸವ ಸಮಿತಿಯ ಅಧ್ಯಕ್ಷ ಪ್ರದೀಪ್ ಸುವರ್ಣ, ಕಾರ್ಯದರ್ಶಿ ಕೃಷ್ಣರಾಜ್ ಹಾಗೂ ಎಲ್ಲಾ ಪದಾಧಿರಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *