ಚೆನೈ: ಜಯಲಲಿತಾ ಅತ್ಯಾಪ್ತರ ಕೈ ಸೇರಿರುವ ಆ ವಿಲ್‍ನಲ್ಲಿ ಸಮರ್ಥ ನಾಯಕತ್ವ ಹಾಗೂ ಜನರನ್ನು ಆಕರ್ಷಿಸಬಲ್ಲ ಓರ್ವ ವ್ಯಕ್ತಿ ಸಿಎಂ ಆಗಬೇಕೆಂದು ಜಯಲಲಿತಾ ಬಯಸಿದ್ದು ,ಈ ಹಿಂದೆ ಜಯ ಬಲಗೈ ಬಂಟ ಪನೀರ್ ಸೆಲ್ವಂ ಹಂಗಾಮಿ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಾರೆ ಎಂಬ ಸುದ್ದಿಯೂ ಕೇಳಿಬಂದಿತ್ತು. ಆದ್ರೆ ಮೂಲಗಳ ಪ್ರಕಾರ ಜಯಲಲಿತಾ ನನ್ನ ಬಳಿಕ ಯಾರು ಸಿಎಂ ಆಗಬೇಕೆಂದು ವಿಲ್ ಬರೆದಿದ್ದಾರೆ ಎನ್ನಲಾಗಿದೆ.

jaya-with-ajith

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಗ್ಯ ಸ್ಥಿತಿ ಇನ್ನೂ ಸುಧಾರಿಸಿಲ್ಲ. ಇದರ ಮಧ್ಯೆ ಅನೇಕ ಊಹಾಪೋಹಾಗಳು ಹರಿದಾಡುತ್ತಿವೆ. ದಕ್ಷಿಣ ಭಾರತದ ಸೂಪರ್ ಸ್ಟಾರ್ ಅಜಿತ್ ಕಮಾರ್ ಹೆಸರನ್ನು ಸೂಚಿಸಿದ್ದಾರಂತೆ. ಹೀಗಾಗಿ ಜಯ ಅವರು ಸದ್ಯಕ್ಕೆ ಚೇತರಿಸಿಕೊಳ್ಳದಿದ್ದರೆ ನಟ ಅಜಿತ್‍ಗೆ ಅನಿರೀಕ್ಷಿತವಾಗಿ ಸಿಎಂ ಪಟ್ಟ ಒಲಿಯಲಿದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

By Suddi9

Leave a Reply

Your email address will not be published. Required fields are marked *