ಪೊಳಲಿ: ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ, ಮಂಗಳೂರು ಇದರ ವತಿಯಿಂದ ರಾಮಕೃಷ್ಣ ತಪೋವನ ಪೊಳಲಿ ಇದರ ಸಹಯೋಗದಲ್ಲಿ ಶ್ರೀ ರಾಜರಾಜೇಶ್ವರೀ ಸಭಾಂಗಣ, ರಾಮಕೃಷ್ಣ ತಪೋವನ ಪೊಳಲಿಯಲ್ಲಿ “ಉಚಿತ ಯೋಗ ಶಿಕ್ಷಣ ತರಬೇತಿ” ಇದರ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ನ.6 ರಂದು ಆದಿತ್ಯವಾರ ಬೆಳಿಗ್ಗೆ 11ಕ್ಕೆ ಆಯೋಜಿಸಲಾಗಿದೆ.

???????????????????????????????

ಅ.7ರಿಂದ ಪ್ರತಿ ನಿತ್ಯ ಬೆಳಿಗ್ಗೆ 5ರಿಂದ 6.30ರವರೆಗೆ ಕೇಂದ್ರ ಸಮಿತಿಯಿಂದಲೇ ಶಿಕ್ಷಣ ಪಡೆದ ನುರಿತ ಶಿಕ್ಷಣ ವರ್ಗದವರಿಂದ ಅಷ್ಟಾಂಗ ಯೋಗಾಸನ, ಪ್ರಾಣಾಯಮ, ಸೂರ್ಯನಮಸ್ಕಾರ, ಧ್ಯಾನ, ಶರೀರ, ಶುದ್ಧೀಕರಣ ಕ್ರಿಯೆ, ಅಗ್ನಿಹೋತ್ರ, ಮುದ್ರೆ, ಅಕ್ಯುಪ್ರೆಶರ್ ಹಾಗೂ ಯೋಗ ಚಿಕಿತ್ಸಾತ್ಮಕ ಕ್ರಿಯೆಗಳು, ಆಯುರ್ವೆದ ಆಹಾರ ಪದ್ದತಿಗಳು, ಭಾಷಣ ಕಲೆ, ಭಜನೆ, ಸತ್ಸಂಗಗಳನ್ನು ಸಮಿತಿಯ ವತಿಯಿಂದ ಹಾಗೂ ನಿತ್ಯ ಜೀವನ ಶೈಲಿಯನ್ನು ಮನಮುಟ್ಟುವಂತೆ ಉಚಿತವಾಗಿ ಹೇಳಿಕೊಡಲಾಗುವುದು. 10ರಿಂದ ಎಲ್ಲಾ ವಯೋಮಿತಿಯ ಪುರುಷರು, ಮಹಿಳೆಯರು ಭಾಗವಹಿಸಬಹುದು.

By suddi9

Leave a Reply

Your email address will not be published. Required fields are marked *