ಪೊಳಲಿ: ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ, ಮಂಗಳೂರು ಇದರ ವತಿಯಿಂದ ರಾಮಕೃಷ್ಣ ತಪೋವನ ಪೊಳಲಿ ಇದರ ಸಹಯೋಗದಲ್ಲಿ ಶ್ರೀ ರಾಜರಾಜೇಶ್ವರೀ ಸಭಾಂಗಣ, ರಾಮಕೃಷ್ಣ ತಪೋವನ ಪೊಳಲಿಯಲ್ಲಿ “ಉಚಿತ ಮಕ್ಕಳ ಚೈತನ್ಯ ಶಿಬಿರ “ ಇದರ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಅ.9 ರಂದು ಆದಿತ್ಯವಾರ ಬೆಳಿಗ್ಗೆ 6.30ಕ್ಕೆ ಆಯೋಜಿಸಲಾಗಿದೆ.

shibira

ಅ.10ರಿಂದ ಪ್ರತಿ ನಿತ್ಯ ಬೆಳಿಗ್ಗೆ 6.30ರಿಂದ 8ರವರೆಗೆ ಕೇಂದ್ರ ಸಮಿತಿಯಿಂದಲೇ ಶಿಕ್ಷಣ ಪಡೆದ ನುರಿತ ಮಕ್ಕಳ ಶಿಕ್ಷಕರಿಂದ ಯೋಗಾ, ಪ್ರಾಣಾಯಾಮ, ಭಜನೆ, ಮಂತ್ರಪಠಣ, ದೇಶೀಯ ಆಟಗಳು, ಮಕ್ಕಳ ಪ್ರತಿಭಾ ಪ್ರದರ್ಶನ, ನಾಯಕತ್ವ ಗುಣಗಳನ್ನು ಬೆಳೆಸುವುದು, ಭಾರತೀಯ ಸಂಸ್ಕಾರ-ಸಂಸ್ಕೃತಿಯ ಭೋದನೆ, ಕೌಟುಂಬಿಕ ನಿರ್ವಹಣೆ, ದೈನಂದಿನ ಸಮಯ ನಿರ್ವಹಣೆ, ನೆನಪಿನ ಶಕ್ತಿ ಹೆಚ್ಚಳ, ಶರೀರ ಶಾಸ್ತ್ರ, ಶಾರೀರಿಕವಾಗಿ, ಮಾನಸಿಕವಾಗಿ ಸದೃಢಗೊಳ್ಳುವ ವಿಚಾರಗಳು, ದೇವರಭಕ್ತಿ ಪೂಜೆಯ ಕ್ರಮ, ಗುರುಹಿರಿಯರು, ಮಾತಾಪಿತರಲ್ಲಿ ಗೌರವ, ದೇಶಭಕ್ತಿ, ಅಷ್ಟಾಂಗ ಯೋಗಪಾಲನೆ, ಮಾತೃ ಪೂಜನ ಇತ್ಯಾದಿ ಹತ್ತಾರು ಅರ್ಥಪೂರ್ಣ, ವೈವಿಧ್ಯಪೂರ್ಣ ತರಬೇತಿಗಳ ಮೂಲಕ ಮಕ್ಕಳ ಮನಸ್ಸನ್ನು ಶರೀರವನ್ನು ಸಂಸ್ಕರಿಸಿ ಮೌಲ್ಯ ಬದ್ಧಗೊಳಿಸಲಾಗುವುದು. 12ರಿಂದ 18 ವರ್ಷ ವಯೋಮಿತಿಯರು ಮಾತ್ರ ಭಾಗವಹಿಸಬಹುದು.

By suddi9

Leave a Reply

Your email address will not be published. Required fields are marked *