ವಿಟ್ಲ: ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ವತಿಯಿಂದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ `ಯೂತ್ ಎಂಪವರ್’ ಬಗ್ಗೆ ಮಾಹಿತಿ ಕಾರ್ಯಕ್ರಮ ವು ನಡೆಯಿತು.
ಕೇಪು ಕಲ್ಲಂಗಳ ಪ್ರೌಢ ಶಾಲೆಯ ಅಧ್ಯಾಪಕ ರಮೇಶ್ ಬಾಯಾರ್ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಆದರ್ಶ ಎ ಎಸ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್, ಕಾರ್ಯದರ್ಶಿ ಮೋಹನ್, ಲಯನೆಸ್ ಕ್ಲಬ್ ಅಧ್ಯಕ್ಷೆ ಲೀನಾ, ಮಂಗೇಶ್ ಭಟ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

