ವಿಟ್ಲ: ಶ್ರೀ. ಕ್ಷೇ. ಧ. ಗ್ರಾ. ಯೋ. ಇದರ ವಿಟ್ಲ ಬಿ ಒಕ್ಕೂಟದ ತ್ರೈಮಾಸಿಕ ಸಭೆಯು ವಿಟ್ಲದ ವಿಠಲ ಪ್ರೌಢ ಶಾಲೆಯ ಸಭಾ ಭವನದಲ್ಲಿ ಒಕ್ಕೂಟದ ಅಧ್ಯಕ್ಷ ಸುಂದರ ಆಚಾರ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಲಯ ಮೇಲ್ವಿಚಾರಕ ಜನಾರ್ಧನರವರು ಜೀವ ವಿಮಾ ಭದ್ರತೆಯ ಬಗ್ಗೆ ಮತ್ತು ಜನಧನ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ಸರಿತಾ ಸಂಪೂರ್ಣ ಸುರಕ್ಷೆಯ ಬಗ್ಗೆ ಮಾಹಿತಿ ನೀಡಿದರು. ಕ್ರಿಸ್ಟಲ್ ತಂಡದ ಬಿಂದು ಸ್ವಾಗತಿಸಿದರು ವಿನಾಯಕ ತಂಡದ ಚಂದ್ರಶೇಖರ್ ವಂದಿಸಿದರು. ಮೋಹನದಾಸ್ ಕಾರ್ಯಕ್ರಮ ನಿರೂಪಿಸಿದರು.

