ವಿಟ್ಲ: ಶ್ರೀ ಕ್ಷೇ ಧ ಗ್ರಾ ಯೋ ವಿಟ್ಲ ವಲಯ ಬಿ ಒಕ್ಕೂಟದ ಕ್ರಿಸ್ಟಾಲ್ ಸಂಘದ ದಶಮಾನೋತ್ಸವ ಕಾರ್ಯಕ್ರಮ ಮೇಗಿನ ಪೇಟೆ ಶಾರದಾ ಆಚಾರ್ಯರವರ ಮನೆಯಲ್ಲಿ ಜರಗಿತು. ಒಕ್ಕೂಟದ ಅಧ್ಯಕ್ಷ ನೆಗಳಗುಳಿ ಸುಂದರ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು.

20160826_160756

ಮುಖ್ಯ ಅತಿಥಿಗಳಾಗಿ ವಲಯ ಮೇಲ್ವಿಚಾರಕ ಜನಾರ್ಧನ, ಸೇವಾಪ್ರತಿನಿಧಿ ಸರಿತಾ ಭಾಗವಹಿಸಿದ್ದರು. ಬಿಂದು ಸ್ವಾಗತಿಸಿದರು. ಜಲಜಾಕ್ಷಿ ವರದಿ ಮಂಡಿಸಿದರು. ಒಕ್ಕೂಟದ ಉಪಾಧ್ಯಕ್ಷೆ ಪ್ರೇಮಾ ಆರ್ ಹೆಗ್ಡೆ, ಕಾರ್ಯದರ್ಶಿ ನಾರಾಯಣ ಗೌಡ, ಜೊತೆ ಕಾರ್ಯದರ್ಶಿ ಗಣೇಶ, ಕೋಶಾಧಿಕಾರಿ ವಿಮಲ ಉಪಸ್ಥಿತರಿದ್ದರು. ಸಂಘದ ಎಲ್ಲಾ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು. ಉಷಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅಕ್ಬರ್ ಖಾನ್ ಸಹಕರಿಸಿದರು.

By suddi9

Leave a Reply

Your email address will not be published. Required fields are marked *