ಬಜಪೆ: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಇವರು ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‍ಗಳಿಗೆ ನೀಡುವ ರಾಜ್ಯ ಮಟ್ಟದ 2014-15ನೇ ಸಾಲಿನ ಪ್ರಥಮ ಪ್ರಶಸ್ತಿಯನ್ನು ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಪಡೆದಿರುತ್ತದೆ.

24vm-bajpe-vss-jpg

ಬೆಂಗಳೂರಿನ ಉತ್ತುಂಗ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‍ನ ವಾರ್ಷಿಕ ಮಹಾಸಭೆಯಲ್ಲಿ ಈ ಪ್ರಶಸ್ತಿಯನ್ನು ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮೋನಪ್ಪ ಶೆಟ್ಟಿ ಎಕ್ಕಾರು ಹಾಗೂ ಪ್ರದಾನ ವ್ಯವಸ್ಥಾಪಕ ಶ್ರೀ ರತ್ನಾಕರ ಶೆಟ್ಟಿ ಅವರು ಸ್ವೀಕರಿಸಿದರು.

ಈ ಸಂದರ್ಭ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‍ನ ಅಧ್ಯಕ್ಷ ಕೆ. ಎನ್ ರಾಜಣ್ಣ, ವ್ಯವಸ್ಥಾಪನ ನಿರ್ದೇಶಕ ರಮಣ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶ್ರೀ ಎಂ.ಎನ್. ರಾಜೇಂದ್ರ ಕುಮಾರ್, ವ್ಯವಸ್ಥಾಪನ ನಿರ್ದೇಶಕ ವಿಶ್ವನಾಥ ನಾಯರ್ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರುಗಳು, ಸಚಿವರು, ಶಾಸಕರು ಉಪಸ್ಥತರಿದ್ದರು. ಈ ಪ್ರಶಸ್ತಿಯನ್ನು ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಕಳೆದ 12 ವರ್ಷಗಳಿಂದ ಸತತವಾಗಿ ಪಡೆಯುತ್ತಿರುವುದು ಉಲ್ಲೇಖನೀಯ.

By Suddi9

Leave a Reply

Your email address will not be published. Required fields are marked *