ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ.) ಇದರ 2015-16ನೇ ಸಾಲಿನ ವಾರ್ಷಿಕ ಮಹಾಸಭೆ ಬಂಟ್ವಾಳ ತಿರುಮಲ ವೆಂಕಟರಮಣ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.

1-1

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬ್ಯಾಂಕಿನ ಅಧ್ಯಕ್ಷ ಜಿ.ಆನಂದ ಮಾತನಾಡಿ ಬ್ಯಾಂಕ್ ಈ ವರ್ಷ 48,62,489-45 ಲಕ್ಷ ಲಾಭದಲ್ಲಿದೆ. ಸದಸ್ಯರ ಸಕರಾತ್ಮಕ ಪ್ರೋತ್ಸಾಹ ಮತ್ತು ವ್ಯವಹಾರ ಬ್ಯಾಂಕಿನ ಬೆಳವಣಿಗೆಗೆ ಸಹಕಾರಿಯಾಗಿದೆ.

2-1

ಆಡಳಿತ ಮಂಡಳಿಯೊಂದಿಗೆ ಸಿಬ್ಬಂದಿಗಳ ನಗುಮೊಗದ ಸೇವೆ ಮತ್ತು ಬ್ಯಾಂಕಿನ ಮೇಲೆ ವಿಶ್ವಾಸವಿಟ್ಟು ವ್ಯವಹಾರ ನಡೆಸುವ ಜನರೇ ಬ್ಯಾಂಕಿನ ಅಭಿವೃದ್ದಿಗೆ ಪ್ರಮುಖ ಎಂದು ಹೇಳಿದರು. ಸಭೆಯಲ್ಲಿ ನಿದೇರ್ಶಕರುಗಳಾದ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಯಂ ಕರುಣೇಂದ್ರ ಪೂಜಾರಿ, ಮನೋಹರ ಮೂಲ್ಯ, ಕೆ.ಎನ್.ಶೇಖರ್, ಸತ್ಯಶಂಕರ್ ರಾವ್, ಲಕ್ಷ್ಮೀ ವಿ.ಪ್ರಭು, ವಿದ್ಯಾವತಿ ಪ್ರಮೋದ್ ಕುಮಾರ್, ಕೆ.ಪ್ರಕಾಶ್, ಸದಾಶಿವ ಶೆಣೈ ಮತ್ತು ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *