ಬಂಟ್ವಾಳ: ಬಂಟ್ವಾಳ ತಾಲೂಕಿನ ಬಾರೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ ಮಾದಕಟ್ಟೆ ಇದರವಾರ್ಷಿಕ ಸಭೆಯು ಸಂಘದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಬಿ ಬಾಲಕೃಷ್ಣ ಅಡ್ಯಂತಾಯ ಇವರು ಮಾತಾಡಿ ` ಸಂಘಕ್ಕೆ ಈ ಸಾಲಿನಲ್ಲಿ 1,22,512.66 ರೂಪಾಯಿ ನಿವ್ವಳ ಲಾಭ ಬಂದಿದ್ದು ಸದಸ್ಯರಿಗೆ ಶೇಕಡಾ 10 ಡಿವಿಡೆಂಟ್ ನೀಡಲಾಗುವುದು’ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ದ. ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜೆ. ಆರ್. ಡಿ. ಸೋಜಾ ಮತ್ತು ನಿಯೋಜಿತ ವಿಸ್ತರಣಾಧಿಕಾರಿ ಪ್ರತಿಭಾ ಭಾಗವಹಿಸಿದ್ದರು. ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ವಿಶೇಷ ಬಹುಮಾನ ಮತ್ತು ಹಾಲು ಹಾಕುತ್ತಿರುವ ಎಲ್ಲಾ ಸದಸ್ಯರಿಗೆ ಪೋತ್ಸಾಹಕ ಬಹುಮಾನಗಳನ್ನು ಅತಿಥಿಗಳು ನೀಡಿದರು. ಸಂಘದ ನಿರ್ದೇಶಕರುಗಳಾದ ಮಹಾಬಲ ಭಟ್, ಎಂ ಗೋಪಾಲಕೃಷ್ಣ ಭಟ್, ಚಂದ್ರಹಾಸ ಶೆಟ್ಟಿ, ಅಬೂಬಕ್ಕರ್ ಎಸ್, ಸೋಮಶೇಖರ್ ಶೆಟ್ಟಿ, ರಂಜಿನಿ ಕೆ, ರತಿ ಚೌಟ, ರಾಧು ಶೆಟ್ಟಿ, ಚೆನ್ನಪ್ಪ ಪೂಜಾರಿ, ಗೋಪಾಲ ಸಪಲ್ಯ ವೇದಿಕಯಲ್ಲಿದ್ದರು. ಕಾರ್ಯದರ್ಶಿ ಶಶಿರೇಖಾ ಸ್ವಾಗತಿಸಿ ವರದಿ ವಾಚಿಸಿದರು. ಅಧ್ಯಕ್ಷ ಬಾಲಕೃಷ್ಣ ಅಡ್ಯಂತಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಶಿಕಲಾ ಸಹಕರಿಸಿದರು.
