ಬಜಪೆ: ಸಾಮಾಜಿಕ ಬದ್ಧತೆಯೊಂದಿಗೆ ಒಂದು ಜಾತಿ-ಸಮುದಾಯಕ್ಕೆ ಸೀಮಿತಗೊಳ್ಳದೆ ಸಮಸ್ತ ಸಮಾಜದ ಏಳಿಗೆ ಹಾಗೂ ಪರಿವರ್ತನೆಯ ಸಾಮಾಜಿಕ ಜವಾಬ್ದಾರಿಗೂ ಬಂಟ ಸಮುದಾಯ ಬದ್ಧರಾಗಿರಬೇಕು. ಸಮಾಜದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಎಲ್ಲರೂ ಸಹಕರಿಸಬೇಕು. ಅಶಕ್ತರಿಗೆ, ಅನಾರೋಗ್ಯದಲ್ಲಿರುವ ನೆರವಿಗೆ ತಮ್ಮ ಗಳಿಕೆಯ ಸ್ವಲ್ಪಾಂಶವನ್ನು ಉತ್ತಮ ಬೆಳವಣಿಗೆ ಎಂದು ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಹೇಳಿದರು.

ಅವರು ಎಕ್ಕಾರು ಕುಂಕಂಠಿಣಿ ಸಭಾಂಗಣದಲ್ಲಿ ಭಾನುವಾರ ಬಂಟರ ಸಂಘ ಎಕ್ಕಾರು ಇದರ 11ನೇ ವರ್ಷದ ಮಹಾಸಭೆ ಸಂದರ್ಭ ಸಾಧಕರಿಗೆ ಗೌರವಾರ್ಪಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ಪುರಸ್ಕಾರ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉನ್ನತ ಮಟ್ಟದ ವಿದ್ಯಾಭ್ಯಾಸದ ಸಲುವಾಗಿ ತನ್ನ ವತಿಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಮಾತನಾಡಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು ಡಾ| ರವೀಂದ್ರನಾಥ ಪೂಂಜಾ ಅವರು ಸಮಾರಂಭ ಉದ್ಘಾಟಿಸಿ ಎಕ್ಕಾರು ಬಂಟರ ಸಂಘದ ಪ್ರಗತಿಪರ ಕಾರ್ಯಯೋಜನೆಗಳನ್ನು ಶ್ಲಾಘಿಸಿದರು. ಸನ್ಮಾನ, ಪ್ರತಿ ಪುರಸ್ಕಾರರಿಯರಾದ ಮೇಲೆಕ್ಕಾರು ಕೇಶವ ಶೆಟ್ಟಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು ಡಾ|ರವೀಂದ್ರನಾಥ ಪೂಂಜಾ, ಕರ್ನಾಟಕ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಚಾರ್ಯ ಪ್ರಶಸ್ತಿ ಪುರಸ್ಕೃತ ಕಟೀಲು ದೇವಳ ಪಿಯು ಕಾಲೇಜಿನ ಪ್ರಿನ್ಸಿಪಾಲ್ಪ್ರೊ. ಜಯರಾಮ ಪೂಂಜಾ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಕ್ಕಾರು ಬಂಟರ ಸಂಘದ ಸದಸ್ಯೆ ಹಾಗೂ ಕ್ರಿಯಾಶೀಲ ಕೃಕೆಯಾಗಿ ಗಮನ ಸೆಳೆದು ಇತ್ತೀಚೆಗೆ ತಾ.ಪಂ. ಚುನಾವಣೆಯಲ್ಲಿ ವಿಜೇತರಾದ ಪ್ರತಿಮ ಶೆಟ್ಟಿ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದಿಸಲಾಯಿತು. 68 ಮಂದಿ ವಿದ್ಯಾರ್ಥಿಗಳಿಗೆ ಪ್ರತಿ ಪುರಸ್ಕಾರ ವಿದ್ಯಾರ್ಥಿ ವೇತನ ನೀಡಿ ಅಭಿನಂದಿಸಲಾಯಿತು. ಬಂಟರ ಮಾತೃ ಸಂಘದ ಆಶ್ರಯದಲ್ಲಿ ಗಣೇಶೋತ್ಸವ ಸಂದರ್ಭ ಜರುಗುವ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸತತ ಏಳನೇ ವರ್ಷ ಪ್ರಶಸ್ತಿ ಗೆದ್ದ ಎಕ್ಕಾರು ಬಂಟರ ಸಂಘ ಮಹಿಳಾ ತಂಡವನ್ನು ಅಜಿತ್ಕುಮಾರ್ ರೈ ಮಾಲಾಡಿ ಅಭಿನಂಸಿದರು.
ಎಕ್ಕಾರು ಬಂಟರ ಸಂಘದ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳೊಗೆ ಬಹುಮಾನ ವಿತರಿಸಲಾುತು. ಅಂತ ಕಲಾದ-ಗಾಯಕ ಬಸವರಾಜ ಹುಬ್ಬಳ್ಳಿ ಅವರನ್ನು ಪಟ್ಲ ಸತಿಶ್ ಶೆಟ್ಟಿ ಅಭಿನಂದಿಸಿದರು. ಬಂಟರ ಸಂಘ ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಜಯರಾಮ ಸಾಂತ ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರಾಜ ಶೆಟ್ಟಿ, ಕಾವೂರು ಬಂಟರ ಸಂಘದ ಅಧ್ಯಕ್ಷ ಎಂ. ಎಸ್. ಶೆಟ್ಟಿ ಸರಪಾಡಿ, ತುಳುಚಿತ್ರ ನಿರ್ಮಾಪಕ ಮುಖೇಶ್ ಹೆಗ್ಡೆ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ನೀತಾ ಕ್ರಮ ಹೆಗ್ಡೆ, ಎಕ್ಕಾರು ಕೊಡೆಮಣಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರ ನಿತಿಶ್ ಹೆಗ್ಡೆ, ಭಗವತ ಪಟ್ಲ ಸತೀಶ್ ಶೆಟ್ಟಿ ಮೋನಪ್ಪ ಶೆಟ್ಟಿ ಎಕ್ಕಾರು, ಕಟೀಲು ದೇವಳ ಪಿಯು ಕಾಲೇಜು ಪ್ರಿನ್ಸಿಪಾಲ್ ಪ್ರೋ ಜಯರಾಮ ಪೂಂಜಾ, ದಿವಾಕರ ಸಾಮಾನಿ, ಉಮೇಶ್ ರೆ, ವಿಕಾಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಸ್ವಾಗತಿಸಿದರು. ಪ್ರತಿನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವರದಿ ಮಂಡಿಸಿದರು. ಗ್ರಾ. ಪಂ. ಅಧ್ಯಕ್ಷ ಸುರೇಶ್ ಶೆಟ್ಟಿ ವಂದಿಸಿದರು. ನಿತೇಶ್ ಶೆಟ್ಟಿ ಹಾಗೂ ದಯಾನಂದ ಮಾಡ ನಿರೂಪಿಸಿದರು. ಶ್ವೇತಾ ಡಿ. ಮಾಡ ಕ್ರೀಡಾ ವರದಿ ನೀಡಿದರು. ಇದೇ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು
