ಕೈಕಂಬ : ಕ್ರೀಡೆಗಳು ಜನರ ನಡುವಿನ ಬಾಂಧವ್ಯವನ್ನು ಬೆಸೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಯು.ಪಿ ಇಬ್ರಾಹಿಂರವರು ಹೇಳಿದರು. ಅವರು ದಿನಾಂಕ 11.09.2016ರಂದು ಗುರುಪುರ ಕೈಕಂಬದ ಮುಂಡಾಲ ಸಮಾಜ ಬಾಂಧವರ ಮುಂಡಾಲ ಕ್ರೀಡೋತ್ಸವವನ್ನು ಉಧ್ಘಾಟಿಸಿ ಮಾತನಾಡಿದರು.4

ಅವರು ಮಾತನಾಡುತ್ತಾ, ಕ್ರೀಡೆಗಳು ಜನರ ನಡುವಿನ ಭಾಂಧವ್ಯವನ್ನು ಬೆಸೆಯುವ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೂ ಸಹಕಾರಿ ಎಂದು ಹೇಳಿದರು. ವೇದಿಕೆಯಲ್ಲಿ ಸೋಮಯ್ಯ ಬೆಳ್ಳೂರು, ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಕುಮಾರ್ ಕೆ. ಆರೋಗ್ಯ ಸಹಾಯಕಿ ಶ್ರೀಮತಿ ವಿಮಲಾರವರು ಉಪಸ್ಥಿತರಿದ್ದರು. ಸಂಜೆ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಮೋನಪ್ಪ ಗುರಿಕಾರರವರು ಮಾತನಾಡುತ್ತಾ ನಮ್ಮ ಸಮುದಾಯವು ಸಂಘಟನೆಗೊಳ್ಳುವಲ್ಲಿ ಈ ಕ್ರೀಡೆಗಳು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯ ಪಟ್ಟರು. unnamed

ಮುಂಡಾಲ ಸಮಾಜವು ಸಂಘಟಿಸಿದ ಕ್ರೀಡೆಗಳಾದ ಕಬಡ್ಡಿಯಲ್ಲಿ ಪ್ರಥಮ ವೈದ್ಯನಾಥ ಫ್ರೆಂಡ್ಸ್ ಕ್ಲಬ್ (ಎ) ಅದ್ಯಪಾಡಿ, ದ್ವಿತೀಯ ವೈದ್ಯನಾಥ ಫ್ರೆಂಡ್ಸ್ ಕ್ಲಬ್ (ಬಿ) ಅದ್ಯಪಾಡಿ, ವಾಲಿಬಾಲ್‍ನಲ್ಲಿ ಪ್ರಥಮ ವೈದ್ಯನಾಥ ಫ್ರೆಂಡ್ಸ್ ಕ್ಲಬ್ ಅದ್ಯಪಾಡಿ, ದ್ವಿತೀಯ ಬ್ರದರ್ಸ್ ಕೈಕಂಬ, ಮಹಿಳೆಯರ ಥ್ರೋಬಾಲ್‍ನಲ್ಲಿ ಪ್ರಥಮ ಪದವು ಫ್ರೆಂಡ್ಸ್ ಕೈಕಂಬ, ದ್ವಿತೀಯ ವೈದ್ಯನಾಥ ಫ್ರೆಂಡ್ಸ್ ಕ್ಲಬ್ ಅದ್ಯಪಾಡಿ ಇವರು ಪಡಕೊಂಡರು.2

2015 – 16 ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿ ಕು. ಪ್ರಥ್ವಿ ಜೆ.ವಿ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಾದ ಸುಮಲತಾ ಪೆರ್ಮುದೆ, ದೀಶಾನ್ ಗುರುಪುರ-ಬಡಕರೆ, ಶೈಲಜಾ ಕಿನ್ನಿಕಂಬ್ಳ, ನಿಖಿಲ್ ಪಡು, ರಾಖೇಶ್ ಕೆಂಜಾರ್, ಋತಿಕಾ ಮೂಡುಶೆಡ್ಡೆ, ಮನೀಶ್ ಕೆ ಅದ್ಯಪಾಡಿ ರವರನ್ನು ಪ್ರಶಸ್ತಿ ಮತ್ತು ಗೌರವ ಧನದೊಂದಿಗೆ ಗೌರವಿಸಲಾಯಿತು. 5

ಈ ಸಂದರ್ಭದಲ್ಲಿ “ ಮುಂಡಾಲ ಸಮಾಜದ ಸಂಘಟನೆಯ ಅವಶ್ಯಕತೆ” ಎಂಬ ಪ್ರಬಂದ ಸ್ಪರ್ಧೆ ನಡೆದಿದ್ದು, ಅದರ ವಿಜೇತರಾದ ಕು. ನಿಧಿ ಸಾಲ್ಯಾನ್ ಪಡು, ಸುಮಲತಾ ಪೆರ್ಮುದೆ, ಶಿವಕಿರಣ್ ಕಂದಾವರ ಪದವು, ಪೂಜಾ ಪಡು, ಕು. ಪ್ರಜ್ಞಾ ಅಂಬೇಡ್ಕರ್ ನಗರ, ಪೇಜಾವರ ಇವರನ್ನು ಪ್ರಶಸ್ತಿ ಮತ್ತು ಗೌರವ ಧನದೊಂದಿಗೆ ಗೌರವಿಸಲಾಯಿತು.

ವೇದಿಕೆಯಲ್ಲಿ, ಆನಂದ ಕಾಜಿಲ, ಸೀತಾರಾಮ ಎಚ್. ಬಿ, ಹರೀಶ್ ಕುಮಾರ್ ಕೆ, ಸುನೀಲ್ ಅದ್ಯಪಾಡಿ, ತಿಮ್ಮಪ್ಪ ಮಾಸ್ಟರ್ ಪಡು, ಸಂತೋಷ್ ಕೊಳಂಬೆ, ದಿನೇಶ್ ಬೈಲುಬೀಡು, ಯಶವಂತ ಕೈಕಂಬ, ಚಿತ್ತರಂಜನ್ ಪಡು, ಅರುಣ ಕೈಕಂಬ ಮತ್ತು ಭಾಸ್ಕರ ಬೆಳ್ಳೂರುರವರು ಉಪಸ್ಥಿತರಿದ್ದರು. ಕು. ಪ್ರಜ್ಞಾ ಅಂಬೇಡ್ಕರ್‍ನಗರ, ಪ್ರಾರ್ಥಿಸಿದರು. ಚಂದಪ್ಪ ಕೊಳಂಬೆ ಸ್ವಾಗತಿಸಿದರು. ಸಮಾಜದ ಅಧ್ಯಕ್ಷರಾದ ಜಯಂತ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತಾಡಿದರು. ಜಯಂತ ಕೊಳಂಬೆ ಧನ್ಯವಾದಗಳನ್ನರ್ಪಿಸಿದರು. ವಿಠಲ್ ಆಳ್ವರವರು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *