ಮೂಡುಬಿದಿರೆ: ವಿವಾಹಿತರೊಬ್ಬರು ತನ್ನ ಮೂಡುಕೊಣಾಜೆಯಲ್ಲಿರುವ ತನ್ನ ಹೆಂಡತಿ ಮನೆಯಿಂದ ನಾಪತ್ತೆಯಾಗಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯರಾಜ್(25) ನಾಪತ್ತೆಯಾದವರು. ಇವರು ಮೂಲತ ಬಂಟ್ವಾಳ ತಾಲೂಕಿನ ಕೆದಿಲದವರಾಗಿದ್ದು, ಮೂಡುಬಿದಿರೆ ಸಮೀಪದ ಮೂಡು ಕೊಣಾಜೆಯ ಯುವತಿಯನ್ನು ಮದುವೆಯಾಗಿದ್ದರು. ಕಳೆದ ಮಂಗಳವಾರ ಹೆಂಡತಿಯ ಮನೆಗೆ ಬಂದಿದ್ದು, ಬಳಿಕ ಮನೆಯಿಂದ ಹೊರಟವರು ನಾಪತ್ತೆಯಾಗಿದ್ದರು. ಅವರ ಪತ್ನಿ ಅಶ್ವಿನಿ ಈ ಬಗ್ಗೆ ಪೋಲಿಸರಿಗೆ ದೂರು ನೀಡಿದ್ದಾರೆ.
ಚಹರೆ: ತೆಳು ಮೀಸೆ, 5 ಅಡಿ ಎತ್ತರ ಇದ್ದು ಮನೆಯಿಂದ ಹೋಗುವಾಗ ಬೂದು ಬಣ್ಣದ ಬಿಳಿ ಮತ್ತು ಕಪ್ಪುಗೆರೆಯ ಬಟ್ಟೆ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು ಭಾಷೆ ಬಲ್ಲವರಾಗಿದ್ದಾರೆ.

