ಕಿನ್ನಿಗೋಳಿ: ಇಂದಿನ ದಿನದಲ್ಲಿ ಹೈನುಗಾರಿಕೆಗೆ ಸರಕಾರ ಉತ್ತಮ ಪ್ರೋತ್ಸಾಹ ನೀಡುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮುಖ್ಯ ವ್ಯವಸ್ಥಾಪಕ ಡಾ. ನಿತ್ಯಾನಂದ ಭಕ್ತ ಹೇಳಿದರು. ಅವರು ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಅತ್ತೂರು ಹಾಲು ಉತ್ಪಾದಕರ ಒಕ್ಕೂಟದ ಉಪ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಹೈನುಗಾರಿಕೆ ಅತ್ಯಂತ ಲಾಭದಾಯಕವಾಗಿದ್ದು ಯುವಕರು ಹೆಚ್ಚಾಗಿ ಇದರ ಬಗ್ಗೆ ಆಕರ್ಷಿತರಾಗುತ್ತಿದ್ದಾರೆ ಎಂದರು. ನೂತನ ಕಟ್ಟಡದ ಉದ್ಘಾಟನೆಯನ್ನು ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವೇಶ್ವರ ಭಟ್ ನೆರವೇರಿಸಿದರು.
ಈ ಸಂದರ್ಭ ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ, ಅಂಖಿಲಾಂಡೇಶ್ವರಿ ದೇವಿಯ ಪ್ರಧಾನ ಅರ್ಚಕ ಅತ್ತೂರು ಬೈಲು ವೆಂಕಟರಾಜ ಉಡುಪ, ಶಂಭು ಮುಕಾಲ್ದಿ, ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನ ಮುಕ್ತೇಸರ ವೈ ಬಾಲಚಂದ್ರ ಭಟ್, ಸಂಘದ ನಿರ್ದೇಶಕರಾದ ತಿಮ್ಮಪ್ಪ ಶೆಟ್ಟಿ, ಶ್ರೀಮತಿ ಕಮಲ ಶೆಟ್ಟಿ, ಶ್ರೀ ಮತಿ ವಿನಿತಾ ಶೆಟ್ಟಿ, ಶ್ರೀಮತಿ ಲತಾ ಶೆಟ್ಟಿ, ಶ್ರೀಮತಿ ಅಮಿತಾ ಶೆಟ್ಟಿ, ಮಾಜಿ ನಿರ್ದೇಶಕರಾದ ನಿಜಯ ಎಲ್ ಕೋಟ್ಯಾನ್, ಚಂದ್ರಹಾಸ ಶೆಟ್ಟಿ, ಪೂವಪ್ಪ ಶೆಟ್ಟಿ, ಜಯ ಬಂಗೇರ, ಮಹಾಬಲ ಶೆಟ್ಟಿ ಪಡುಮನೆ, ಗೀತಾ ಎಮ್ ಅಳ್ವ, ಪ್ರಕಾಶ್ ಶೆಟ್ಟಿ ಸುರಗಿರಿ, ಬಾಬು ಶೆಟ್ಟಿ ಭಂಡಾರ ಮನೆ, ಕೆಮ್ರಾಲ್ ಪಂಚಾಯತ್ ಅಬಿವೃದ್ದಿ ಅಧಿಕಾರಿ ರಮೇಶ್ ರಾಥೋಡ್, ಗಂಗಾಧರ ಶೆಟ್ಟಿ ಮೂಡ್ರಗುತ್ತು, ಅಖೀಲಾಂಡೇಶ್ವರೀ ಮಹಿಳಾ ಮಂಡಳಿಯ ಕಾರ್ಯದರ್ಶಿ ರತ್ನಾವತಿ ಶೆಟ್ಟಿ, ಕೋಶಾಧಿಕಾರಿ, ವನಜ ಬಂಗೇರ, ಮತ್ತಿತರರು ಇದ್ದರು. ಸಂಘದ ಅಧ್ಯಕ್ಷ ಚರಣ್ ಜೆ ಶೆಟ್ಟಿ ಸ್ವಾಗತಿಸಿ, ಜಯಂತಿ ಶೆಟ್ಟಿ ಮತ್ತು ಲಕ್ಷೀ ಭಂಡಾರಿ ನಿರೂಪಿಸಿದರು. ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಲ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
ಚಿತ್ರ;13ಕಿನ್ನಿ ಕಟ್ಟಡ

