ಮುಲ್ಕಿ: ಕಟೀಲು ದೇವಳದ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣರ ಮನೆಗೆ ನುಗ್ಗಿದ ದರೋಡೆಕೋರರ ತಂಡ ಮನೆಯವರನ್ನು ಬೆದರಿಸಿ ಲಕ್ಷಾಂತರ ಮೌಲ್ಯದ ನಗನಗದು ದರೋಡೆ ನಡೆಸಿ ಪರಾರಿಯಾದ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ.
ಕಟೀಲು ದೇವಳದಲ್ಲಿ ನವರಾತ್ರಿ ಪ್ರಯುಕ್ತ ಕಟೀಲು ಭಕ್ತರಿಂದ ತ್ರತೀಯ ದಿನದ ಮೆರವಣಿಗೆ ಇದ್ದು, ಮನೆಯವರು ಕಟೀಲಿನಿಂದ ಸುಮಾರು 11.30 ಮನೆಗೆ ಬಂದಿದ್ದರು, ರಾತ್ರಿ ಸುಮಾರು 12.15ಕ್ಕೆ ಕಳ್ಳರು ಮನೆಯ ಕಾಲಿಂಗ್ ಬೆಲ್ ಮಾಡಿದ್ದು, ಕೂಡಲೇ ವಾಸುದೇವ ಆಸ್ರಣ್ಣ ಅವರ ಪತ್ನಿ ಕಿಟಕಿ ಮೂಲಕ ವಿಚಾರಿಸಿದಾಗ , ನಮ್ಮವನಿಗೆ ಅನಾರೋಗ್ಯವಿದೆ ದೇವರ ಪ್ರಸಾದ ಕೊಡಿ ಎಂದು ಕೇಳಿದಾಗ, ಆಸ್ರಣ್ಣ ಅವರ ಪತ್ನಿ ಬಾಗಿಲು ತೆಗೆಯಲು ಒಪ್ಪದಿದ್ದಾಗಾ 5 ಮಂದಿ ದರೋಡೆಕೋರರು ಮುಂಬಾಗದ ಬಾಗಿಲು ಒಡೆದರು ಈ ಮದ್ಯೆ 2 ಜನ ಟ್ಯಾರಸಿ ಮೆಲ್ಭಾಗದಿಂದ ಮನೆಯ ಒಳ ನುಗ್ಗಿದ್ದು, ರಿವಾಲ್ವರ್, ತಲ್ವಾರ್, ರಾಡ್ ಮೂಲಕ ಮನೆಯವರನ್ನು ಹೆದರಿಸಿ, ಮನೆಯಲ್ಲಿದ್ದ ಸುಮಾರು 82 ಪವನ್ ಬಂಗಾರದ ಒಡವೆ ಮತ್ತು 50 ಸಾವಿರ ನಗದು ದರೋಡೆ ಮಾಡಿ, ಮನೆಯವರ ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ.
ಈ ಮದ್ಯೆ ಆಸ್ರಣ್ನ ಮಗಳು ತನ್ನ ಚಿಕ್ಕಪ್ಪ ವೆಂಕಟರಮಣ ಆಸ್ರಣ್ಣರಿಗೆ ಕಾಲ್ ಮಾಡುವಾಗ ದರೋಡೆಕೋರರು ರಿವಾಲ್ವರ್ ತೋರಿಸಿ ಹೆದರಿಸಿದ್ದಾರೆ, ಕರೆ ಬಂದದನ್ನು ಗಮನಿಸಿದ ವೆಂಕಟರಮಣ ಆಸ್ರಣ್ಣ ಕೂಡಲೇ ಅಲ್ಲಿಗೆ ದಾವಿಸಿದ್ದು ಆಗ ಪ್ರಕರಣ ಗೊತ್ತಾಗಿದೆ. ಒಟ್ಟು 8 ಮಂದಿ ಕಳ್ಳರು ಇದ್ದು ಒಬ್ಬ ತನ್ನ ಮುಖವನ್ನು ಮರೆಮಾಚುವಂತೆ ಬಟ್ಟೆ ಕಟ್ಟಿದ್ದ .ಕಟೀಲು ದೇವಳದಲ್ಲಿ ನವರಾತ್ರಿ ಪೂಜೆ ನಡೆಯುತ್ತಿದ್ದ ಕಾರಣ ಕಂಕಣ ತೊಟ್ಟಿದ್ದು ದೇವಸ್ಥಾನದಲ್ಲಿ ಉಳಿದುಕೊಂಡಿದ್ದರು. ಬಜಪೆ ಪೊಲೀಸರು ಸ್ಥಳಕ್ಕೆ ದಾವಿಸಿ ತನಿಖೆ ನಡೆಸುತ್ತಿದ್ದಾರೆ.
