ಬಂಟ್ವಾಳ: ಅಕ್ರಮ ಹಾಗೂ ಯಾಂತ್ರೀಕೃತ ಮರಳುಗಾರಿಕೆಯನ್ನು ಜಿಲ್ಲಾಡಳಿತ ನಿಷೇಧಿಸಿದ್ದರೂ ಕೂಡ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿ ಕಿನಾರೆಗಳಲ್ಲಿ ಅಲ್ಲಲ್ಲಿ ಮರಳುಗಾರಿಕೆ ನಡೆಯುತ್ತಿದೆ.
maining

ರಾಜಕೀಯ ವ್ಯಕ್ತಿಗಳ ಸಹಕಾರದಲ್ಲಿಯೇ ಪ್ರಭಾವಿಗಳು ಮರಳುಗಾರಿಕೆ ನಡೆಸುತ್ತಿದ್ದು ಜಿಲ್ಲಾಡಳಿತ ಜಾಣ ಕುರುಡು ಪ್ರದರ್ಶೀಸುತ್ತಿದೆ. ಯಾಂತ್ರೀಕೃತ ಮರಳುಗಾರಿಕೆಯನ್ನು ಕಾನೂನುಬದ್ದವಾಗಿ ನಿರ್ಬಂಧಿಸಲಾಗಿದ್ದರೂ ಕೂಡ ಜೆಸಿಬಿ, ಕ್ರೇನ್ ಯಂತ್ರಗಳನ್ನು ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದೆ. ಸೇತುವೆಯ ಇಕ್ಕೆಲಗಳಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿದ್ದರೂ ಸೇತುವೆಯ ಬದಿಯೀಂದಲೇ ದೋಣಿಯ ಮೂಲಕ ಮರಳು ಎತ್ತಲಾಗುತ್ತಿದೆ. ಬಳಿಕ ಟಿಪ್ಪರ್ ಲಾರಿ, ಪಿಕಪ್‍ಗಳ ಮೂಲಕ ಗೌಫ್ಯ ಸ್ಥಳಗಳಲ್ಲಿ ದಾಸ್ತನಿಡಲಾಗುತ್ತಿದೆ. ಅಲ್ಲಿಂದ 10 ಚಕ್ರಗಳ ವಾಹನದ ಮೂಲಕ ಕೇರಳ, ಬೆಂಗಳೂರು ಸೇರಿದಂತೆ ಹೊರ ರಾಜ್ಯ ಹಾಗೂ ಹೊರೆ ಜಿಲ್ಲೆಗಳಿಗೆ ದುಬಾರಿ ಬೆಲೆಗಳಿಗೆ ಮಾರಾಟ ಮಾಡಲಾಗುತ್ತಿದೆ.

ತಾಲೂಕಿನ ಶಾಂತಿ ಅಂಗಡಿ, ತುಂಬೆ, ತಲಪಾಡಿ, ಬ್ರಹ್ಮರಕೂಟ್ಲು ಸೇರಿದಂತೆ ನದಿ ಕಿನಾರೆಯ ಬಹುತೇಕ ಸ್ಥಳಗಳಲ್ಲಿ ನಿರಾತಂಕವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಜಿಲ್ಲಾಡಳಿತದ ವಿಧಿಸಿದ್ದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮರಳುಗಾರಿಕೆ ನಡೆಯುತ್ತಿದ್ದರೂ ಕೂಡ ಮರಳುದಂಧೆ ಕೋರರ ವಿರುದ್ದ ಯಾವುದೇ ಕ್ರಮ ಜರುಗಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಡವರು ಮನೆ ಕಟ್ಟಲು ಮರಳಿನ ಅಬಾವ ಸೃಷ್ಟಿಸಿ ತೊಂದರೆ ನೀಡಲಾಗುತ್ತಿದೆ. ಪ್ರಭಾವಿಗಳು ಅಕ್ರಮ ಮರಳುಗಾರಿಕೆ ನಡೆಸಿ ಹೊರ ಜಿಲ್ಲೆಗಳಿಗೆ ಮಾರಾಟ ಮಾಡುತ್ತಿದ್ದರೂ ಕಂಡು ಕಾಣದಂತೆ ಮೌನವಾಗಿರುವುದು ವ್ಯವಸ್ಥೆಯನ್ನು ಅಣಕಿಸುವಂತಿದೆ.

By suddi9

Leave a Reply

Your email address will not be published. Required fields are marked *