ಬಂಟ್ವಾಳ: ಬಂಟ್ವಾಳದ ಬಿ.ಜೆ.ಪಿ ಯುವ ಮೋರ್ಚಾ ಸಮಿತಿಯ ಪದಗ್ರಹಣ ಮತ್ತು ಕಾರ್ಯಕಾರಿಣಿ ಸಮಾರಂಭವು ಬಿ.ಸಿ.ರೋಡು ಪಕ್ಷದ ಕಚೇರಿಯಲ್ಲಿ ಅ.6 ರಂದು ಜರಗಿತು. ಮಾಜಿ ಶಾಸಕರಾದ ರುಕ್ಮಯ ಪೂಜಾರಿ ಮತ್ತು ಕೆ.ಪದ್ಮನಾಭ ಕೊಟ್ಟಾರಿಯವರು ಮಾತನಾಡಿ ಯುವ ಕಾರ್ಯಕರ್ತರು ಪಕ್ಷದ ಗೆಲುವಿಗೆ ಯಾವ ರೀತಿ ತೊಡಗಿಸಿಕೊಳ್ಳಬಹುದೆಂದು ಮಾಹಿತಿಯ ಜೊತೆಗೆ ಶುಭ ಹಾರೈಸಿದರು.

20161006_115332

ಯುವ ನಾಯಕರಾದ ರಾಜೇಶ್ ನಾೈಕ್ ಉಳಿಪಾಡಿಗುತ್ತು ಮಾತನಾಡಿ ಯುವ ಕಾರ್ಯಕರ್ತರ ಜವಬ್ದಾರಿಯನ್ನು ನೆನಪಿಸಿ ಶುಭ ಹಾರೈಸಿದರು.ಕ್ಷೇತ್ರದ ಅಧ್ಯಕ್ಷರಾದ ದೇವದಾಸ ಶೆಟ್ಟಿ ಮುಂದಿನ ದಿನಗಳಲ್ಲ್ಲಿ ಎಲ್ಲಾ ಮೋರ್ಚಾಗಳು ತಮ್ಮ ಜವಾಬ್ದಾರಿಯನ್ನು ಆರಿತು ಕೆಲಸ ಮಾಡಿ ಸಂಘಟನೆಯನ್ನುಪ್ರತೀ ಬೂತ್ ಮಟ್ಟದಲ್ಲಿ ಬಲಪಡಿಸುವಂತೆ ತಿಳಿಸಿದರು.

ವೇದಿಕೆಯಲ್ಲಿ ಜಿಲ್ಲಾ ಬಿ.ಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾದ ಹರೀಶ್ ಪೂಂಜ, ಮಂಡಲ ಜಿಲ್ಲಾ ಬಿ.ಜೆಪಿ ಉಪಾಧ್ಯಕ್ಷರಾದ ಜಿ.ಆನಂದ, ಮಂಡಲ ಕಾರ್ಯದರ್ಶಿಗಳಾದ ಶ್ರೀ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹರೀಶ್ ಮೂಡುಶೆಡ್ಯೆ, ಮಂಡಲ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಂತೋಷ್ ರಾಯಿಬೆಟ್ಟು, ಜಿಲ್ಲಾ ಯುವ ಮೋರ್ಚಾದ ಕಾರ್ಯದರ್ಶಿ ಸುದರ್ಶನ್ ಸರಪಾಡಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ತುಂಗಪ್ಪ ಬಂಗೇರ, ಕಮಲಾಕ್ಷಿ ಜಿ ಪೂಜಾರಿ, ರವೀಂದ್ರ ಕಂಬಳಿ, ಚೆನ್ನಪ್ಪ ಕೋಟ್ಯಾನ್, ರಾಜ್ಯ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾದ ಪೃಥ್ವಿರಾಜ್, ಮಹೇಶ್, ವಿಶೇಷ ಆಹ್ವಾನಿತರಾಗಿ ಕು//ಭವ್ಯ, ಜಿಲ್ಲಾ ಬಿ.ಜೆ.ಪಿ ಯುವ ಮೋರ್ಚಾದ ಕೋಶಾಧಿಕಾರಿ ಶಶಾಂಕ್, ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ದಿನೇಶ್ ಅಮ್ಟೂರು, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಕಲ್ಲಡ್ಕ ಮುಂತಾದವರು ಉಪಸ್ಥಿತರಿದ್ದರು. ಶ್ರೀ ವಜ್ರನಾಥ ಕಲ್ಲಡ್ಕ ಸ್ವಾಗತಿಸಿದರು.ಮಂಡಲ ಯುವ ಮೋರ್ಚಾದ ಉಪಾಧ್ಯಕ್ಷರಾದ ರಂಜಿತ್ ಮೈರ ವಂದಿಸಿದರು. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *