ಸುದ್ದಿ9:ಬಂಟ್ವಾಳ: ಕಂದಾಯ ಇಲಾಖೆಯನ್ನು ಜನರ ಬಳಿಗೆ ತರುವ ಕಂದಾಯ ಅದಾಲತ್ ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ.ಜನರ ಅಹವಾಲುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸ್ಥಳದಲ್ಲಿಯೇ ಸ್ಪಂದಿಸಿ ವಿಲೇವಾರಿ ಮಾಡಲಾಗುವುದು ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಮಂಗಳವಾರ ಬಂಟ್ವಾಳ ತಾಲೂಕು ಚೆನ್ನೈತ್ತೋಡಿ ಗ್ರಾ.ಪಂ.ರಾಜೀವ ಗಾಂ ಸೇವಾ ಕೇಂದ್ರ ಸ`ಾಂಗಣದಲ್ಲಿ ಜರಗಿದ ಚೈನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಚೆನ್ನೈತ್ತೋಡಿ,ಕೊಡಂಬೆಟ್ಟು ,ಪಿಲಿಮೊಗರು,ಅಜ್ಜಿಬೆಟ್ಟು ಗ್ರಾಮಗಳ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದ.ಕ.ಜಿಲ್ಲಾದಿಕಾರಿ ಎ.ಬಿ.ಇಬ್ರಾಹಿಂ ಅವರು ಕಾರ್ಯಕ್ರಮದಲ್ಲಿ `ಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಥಳದಲ್ಲಿಯೇ ಕಡತ ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಕಂದಾಯ ಅದಾಲತ್ ಅವಕಾಶವಾಗಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆಯಬೇಕೆಂದು ಹೇಳಿದರು. ಪಹಣಿ ಪತ್ರದಲ್ಲಿ ತಿದ್ದುಪಡಿ,ಕಾಲಂ 3,ಕಾಲಂ 9,ಕಾಲಂ 11ರಲ್ಲಿ ವ್ಯತ್ಯಾಸ,ವಿಸ್ತೀರ್ಣ ವ್ಯತ್ಯಾಸ ಸರಿಪಡಿಸುವುದು,ಹೆಸರು ತಿದ್ದುಪಡಿಗಳನ್ನು ನಡೆಸಬಹುದು ಎಂದು ಅವರು ಮಾಹಿತಿ ನೀಡಿದರು.
ಸಹಾಯಕ ಕಮಿಷನರ್ ಪ್ರಶಾಂತ್, ಬಂಟ್ವಾಳ ತಹಶೀಲ್ದಾರ್ ಮಲ್ಲೇಸ್ವಾಮಿ,ಬಂಟ್ವಾಳ ತಾ.ಪಂ.ಕಾರ್ಯನಿರ್ವಣಾಕಾರಿ ಸಿಪ್ರಿಯಾ ಮಿರಾಂದ, ಬಂಟ್ವಾಳ ತಾ.ಪಂ.ಅ`್ಯಕ್ಷ ಯಶವಂತ ಡಿ.,ಉಪಾ`್ಯಕ್ಷೆ ವಿಲಾಸಿ ಶಾಂತವೀರ ಪೂಜಾರಿ, ಕಂದಾಯ ಉಪತಹಶೀಲ್ದಾರ್ ಸಾ`ು,ತಾ.ಪಂ.ಸದಸ್ಯ ರಮೇಶ್ ಕುಡ್ಮೇರು,ಚೆನ್ನೈತ್ತೋಡಿ ಗ್ರಾ.ಪಂ.ಅ`್ಯಕ್ಷೆ ಮೋಹಿನಿ ಹರೀಶ್,ಉಪಾ`್ಯಕ್ಷ ಆನಂದ ಆಚಾರ್ಯ,ಪಂ.ಅ.ಅಕಾರಿ `ರ್ಮರಾಜ್,ಗ್ರಾಮ ಲೆಕ್ಕಿಗೆ ಯಶ್ವಿತಾ,ಗ್ರಾ.ಪಂ.ಸದಸ್ಯರಾದ ನವೀನಚಂದ್ರ ಶೆಟ್ಟಿ ,ಅನಂತ ಪೈ,ಯತೀಶ್ ಶೆಟ್ಟಿ ,ಶಿವರಾಮ ಪೂಜಾರಿ,ಪದ್ಮಾವತಿ,ಮೋಹನದಾಸ ಗಟ್ಟಿ ,ಆನಂದ ಪೂಜಾರಿ,ಪ್ರಮುಖರಾದ ಶ್ರೀ`ರ ಜಿ.ಪೈ,ಯುವರಾಜ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ನಾಲ್ಕು ಗ್ರಾಮಗಳ ಗ್ರಾಮಸ್ಥರು ಪಹಣಿಪತ್ರಗಳಿಗೆ ಸಂಬಂಸಿದಂತೆ 196 ವಿವಿ` ಸಮಸ್ಯೆಗಳ ಅಜರ್ಿಗಳನ್ನು ಸಲ್ಲಿಸಿದರು.ಅವುಗಳಲ್ಲಿ 168 ಅಜರ್ಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಿ ಪರಿಹಾರ ಒದಗಿಸಲಾಯಿತು.ಉಳಿದವುಗಳಿಗೆ ಕ್ರಮ ಕೈಗೊಳ್ಳಲು ತಹಶೀಲ್ದಾರ್ ಅವರು ಸೂಚಿಸಿದರು.
ಸಹಾಯಕ ಕಮಿಷನರ್ ಪ್ರಶಾಂತ್ಅವರು ಸ್ವಾಗತಿಸಿದರು. ಬಂಟ್ವಾಳ ತಹಶೀಲ್ದಾರ್ ಮಲ್ಲೇಸ್ವಾಮಿ ಅವರು ಕಾರ್ಯಕ್ರಮ ನಿರೂಪಿಸಿದರು.


