ಸುದ್ದಿ9ಬಂಟ್ವಾಳ: ಭಾರತೀಯ ಜೀವ ವಿಮಾ ನಿಗಮದ ಉಡುಪಿ ವಿಭಾಗದ ವತಿಯಿಂದ ಪ್ರಸ್ತುತ ಆಥರ್ಿಕ ವರ್ಷದ ಮೊದಲ ‘ಹೊಸ ಜೀವನ ಮಂಗಳ’ ಪಾಲಿಸಿಯ ಬಿಡುಗಡೆ ಕಾರ್ಯಕ್ರಮ ಮಂಗಳವಾರ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ಸಭಾಂಗಣದಲ್ಲಿ ನಡೆಯಿತು. ಬಂಟ್ವಾಳ ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ, ಪ್ರಗತಿಪರ ಕೃಷಿಕ ಪ್ರಕಾಶ್ ಕಾರಂತ ಹಾಗೂ ದ.ಕ ಜಿಲ್ಲಾ ಕೃಷಿ ಅಭಿವೃದ್ದಿ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಜಂಟಿಯಾಗಿ ಹೊಸ ಜೀವನ ಮಂಗಳ ಪಾಲಿಸಿಯನ್ನು ಬಿಡುಗಡೆಗೊಳಿಸಿ ಐದು ಮಂದಿ ಪಾಲಿಸಿದಾರರಿಗೆ ಸಾಂಕೇತಿಕವಾಗಿ ಹಂಚಿದರು. ಎಲೈಸಿಯ ಉಡುಪಿ ವಿಭಾಗದ ಹಿರಿಯ ವ್ಯವಸ್ಥಾಪಕ ಶಶಿಧರ್ ಈ ಸಂಧರ್ಭ ಹಾಜರಿದ್ದು ಈ ವಿಮಾ ಪಾಲಿಸಿಯಿಂದ ದೊರಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ ಪ್ರಕಾಶ್ ಕಾರಂತ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನ ಹಲವರು ಸಮಾಜಮುಖಿ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದೆ. ದೀನ ದುರ್ಬಲರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿಕೊಳ್ಳುವ ಮೂಲಕ ಆರೋಗ್ಯ ಸೇವೆ ನೀಡುತ್ತಿದೆ. ಅಲ್ಲದೆ ಜೀವವಿಮೆಯ ಪರಿಹಾರ ಮೊತ್ತವನ್ನು ನೀಡುವ ಮೂಲಕ ಸಮಾಜದ ನೊಂದವರಿಗೆ ಆಸರೆಯಾಗಿ ನಿಂತಿದೆ ಎಂದು ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು. ರವೀಂದ್ರ ಕಂಬಳಿ ಶುಭ ಹಾರೈಸಿದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಪ್ರಸ್ತಾವಿಕವಾಗಿ ಮಾತನಾಡಿ ಸೇವಾಂಜಲಿಯ ಸೇವೆ ನಿರಂತರವಾಗಿ ನಡೆಯಬೇಕಾದರೆ ಎಲ್ಲರ ಸಹಕಾರ ಅಗತ್ಯ. ಈಗಾಗಲೇ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ನೆರವು ಬೇಡಿಕೊಂಡು ನೂರಾರು ಮಂದಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಸಂಸ್ಥೆಯ ವತಿಯಿಂದ ಕೈಗೊಳ್ಳುವ ಯೋಜನೆಗಳು ಜನರಿಗೆ ತಲುಪಿ ಅದರಿಂದ ನೆಮ್ಮದಿ ಕಂಡುಕೊಂಡರೆ ನಮ್ಮ ಶ್ರಮ ಸಾರ್ಥಕ ಎಂದರು. ಸಂಸ್ಥೆಗೆ ನೆರವು ನೀಡಿದ ದಾನಿಗಳಿಗೆ ಅವರು ಕೃತಜ್ಞತೆೆ ಸಲ್ಲಿಸಿದರು. ಜನಶ್ರೀ ವಿಮಾ ಯೋಜನೆಯ ಫಲಾನುಭವಿ ಸುಜೀರ್ ಸಂಜೀವಶೆಟ್ಟಿಯವರ ನಿಧನದ ಹಿನ್ನಲೆಯಲ್ಲಿ ಅವರ ಪತ್ನಿ ಸುಜಾತಶೆಟ್ಟಿಯವರಿಗೆ 31 ಸಾವಿರದ ಪರಿಹಾರ ಚೆಕನ್ನು ಈ ಸಂದರ್ಭ ಅತಿಥಿಗಳು ಹಸ್ತಾಂತರಿಸಿದರು. ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ವಜ್ರನಾಭ ಶೆಟ್ಟಿ, ತಾ.ಪಂ.ಸದಸ್ಯೆ ಗೀತಾ ಕೇಶವ ಪ್ರಮುಖರಾದ ಉಮಾಚಂದ್ರಶೇಖರ್, ಪ್ರಕಾಶ್ಶೆಟ್ಟಿ ತುಂಬೆ, ಸುಕುಮಾರ್ ಅಕರ್ುಳ, ಮೋಹನ್ ಸಾಲ್ಯಾನ್ ಬೆಂಜನಪದವು, ನಾಗಪ್ಪ ಶೆಟ್ಟಿ ಮೇರಮಜಲು, ನಾರಾಯಣ ಬೆಳ್ಚಡ ಮೇರಮಜಲು, ಎ.ಕೆ.ಗಿರೀಶ್ ಫರಂಗಿಪೇಟೆ, ಪ್ರಶಾಂತ್ ತುಂಬೆ ಮತ್ತಿತರರು ಹಾಜರಿದ್ದರು.

BTW_JUN17_1A

BTW_JUN17_1B

By suddi9

Leave a Reply

Your email address will not be published. Required fields are marked *