ಬಂಟ್ವಾಳ: ಪುಂಜಾಲಕಟ್ಟೆ ಪೇಟೆಯಿಂದ ಬೆರ್ಕಳವನ್ನು ಸಂಪರ್ಕಿಸುವ ರಸ್ತೆ ಕೆಸರುಮಯವಾಗಿ ಕಾಲಿಡಲೂ ಅಸಾಧ್ಯವಾದ ಪರಿಸ್ಥಿತಿ ಉಂಟಾಗಿದ್ದು ಸಂಪೂರ್ಣ ಹದಗೆಟ್ಟ ರಸ್ತೆಯಲ್ಲಿ  ವಾಹನಗಳು ಸಂಚರಿಸಲು ಆಗದೇ  ಸಾರ್ವಜನಿಕರು ನಡೆದಾಡಲು ಪರದಾಡುವಂತಾಗಿದೆ. ಮಣ್ಣು ತುಂಬಿದ್ದರಿಂದ ಕೆಸರುಮಯವಾಗಿ ಜನ ಹಾಗೂ ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದುIMG-20140616-WA0016

IMG-20140616-WA0014

 

punjalkatte road
ಕಳೆದ ಹಲವಾರು ವರ್ಷಗಳಿಂದ ದುರಸ್ತಿ ಕಾಣದ ಈ ರಸ್ತೆ ಸಾರ್ವಜನಿಕರ ಪ್ರತಿಭಟನೆಯಿಂದ ಮಳೆಗಾಲದ ಮುಂಚೆ ದುರಸ್ತಿ ಕಾರ್ಯ ಆರಂಭಿಸಿದ್ದು ಅಸಮರ್ಪಕ ಯೋಜನೆಯಿಂದ ಇದ್ದ ರಸ್ತೆಯೂ ಹಾಳಾಗಿ ಹೋಗಿದೆ. ಈ ರಸ್ತೆಯಲ್ಲಿ ಸಾಗುವವರು ಯಮಯಾತನೆ ಅನುಭವಿಸುತ್ತಿದ್ದಾರೆ.
ಜಿಲ್ಲಾ ಪಂಚಾಯತ್ಗೆ ಸಂಬಂದಿಸಿದ ಈ ರಸ್ತೆ ಕೆಲವೆಡೆ ಬಂಟ್ವಾಳ ತಾಲೂಕಿಗೆ ಹಾಗೂ ಕೆಲವೆಡೆ ಬೆಳ್ತಂಗಡಿ ತಾಲೂಕಿಗೆ ಸೇರಿದೆ.ಬೆಳ್ತಂಗಡಿ ತಾಲೂಕಿನ ಅಳದಂಗಡಿ ಜಿ.ಪಂ.ಕ್ಷೇತ್ರ ಹಾಗೂ ಬಂಟ್ವಾಳ ತಾಲೂಕಿನ ಸರಪಾಡಿ ಜಿ.ಪಂ.ಕ್ಷೇತ್ರಗಳನ್ನು ಒಳಗೊಂಡಿದೆ. ಈ ರಸ್ತೆ ಬೆರ್ಕಳ,ನರಸಿಕುಮೇರು,ಮಾಡಪಲ್ಕೆಯಿಂದ ಪಾಂಡವರಕಲ್ಲಿಗೆ ಸಂಪರ್ಕ ಹಾಗೂ ಮಾಡಪಲ್ಕೆಯಿಂದ ಕಟ್ಟದಪಡ್ಪು ,ಕಕ್ಯಪದವು ಮಾರ್ಗವಾಗಿ ನೇರ ಉಪ್ಪಿನಂಗಡಿಯನ್ನು ಸಂಪರ್ಕಿಸುತ್ತದೆ. ಈ ಭಾಗದ ಜನರು ವಾಣಿಜ್ಯ ವ್ಯವಹಾರಗಳಿಗೆ, ಆಸ್ಪತ್ರೆಗೆ ಹಾಗೂ ವಿದ್ಯಾರ್ಥಿಗಳು ಪುಂಜಾಲಕಟ್ಟೆಗೆ ಬರಬೇಕಾದರೆ ಈ ರಸ್ತೆಯನ್ನೇ ಅವಲಂಬಿಸುತ್ತಿದ್ದಾರೆ. ಈ ರಸ್ತೆಯಿಂದಾಗಿ ಬಹಳ ಸುತ್ತು ಬಳಸಿ ಪಾಂಡವರಕಲ್ಲು – ಮಡಂತ್ಯಾರು ಮಾರ್ಗವಾಗಿ ಪ್ರಯಾಣಿಸುತ್ತಿದ್ದಾರೆ. ದುಬಾರಿ ಹಣ ತೆತ್ತು ಇಷ್ಟು ದೂರ ಪ್ರಯಾಣಿಸಲು ಅನಾನುಕೂಲವಾದವರು ಎದ್ದುಬಿದ್ದು ಕಾಲು ಕೆಸರು ಮಾಡಿಕೊಂಡು ನಡೆಯಲು ಗಂಟೆಗಟ್ಟಲೆ ವ್ಯಯಿಸುತ್ತಾರೆ. ಅನಾರೋಗ್ಯದಿಂದ ಬಳಲುವವರಿಗಂತೂ ದೇವರೇ ಗತಿ. ಹಾಲು ಸರಬರಾಜು ಕೇಂದ್ರಕ್ಕೆ ಹಾಲು ಕೊಂಡೊಯ್ಯುವ ಅಟೋರಿಕ್ಷಾದ ಸಂಕಷ್ಟ ಹೇಳತೀರದು. ಸಾರ್ವಜನಿಕರು ಈ ಪರಿಸ್ಥಿತಿಯಿಂದ ಯಾವಾಗ ಮುಕ್ತಿ ದೊರಕುವುದೋ ಎಂದು ಪರಿತಪಿಸುತ್ತಿದ್ದಾರೆ.
ಇಲ್ಲಿನ ಪರಿಸರದಲ್ಲಿ ಕಾರ್ಯಚರಿಸುತ್ತಿರುವ ಕಲ್ಲಿನ ಕೋರೆಗಳ ಘನಗಾತ್ರದ ಟಿಪ್ಪರ್ ಗಳಿಂದಾಗಿ ರಸ್ತೆ ಹೊಂಡ ಉಂಟಾಗಿತ್ತು ಎಂದು ಸಾರ್ವಜನಿಕರು ಆರೋಪಿಸಿದ್ದರು. ಜನರ ಪ್ರತಿಭಟನೆಗೆ ಸ್ಪಂದಿಸಿದ ಬೆಳ್ತಂಗಡಿ ಹಾಗೂ ಬಂಟ್ವಾಳ ಶಾಸಕರು ರಸ್ತೆ ಅಭಿವೃದ್ಧಿಯ ಭರವಸೆ ನೀಡಿದ್ದರು. ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ಅವರು ರಸ್ತೆ ಅಭಿವೃದ್ಧಿಗೆ 30 ಲ.ರೂ. ಅನುದಾನ ಒದಗಿಸಿಕೊಡುವ ಭರವಸೆ ನೀಡಿ ಗುತ್ತಿಗೆದಾರನಲ್ಲಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದರು. ಆ ಪ್ರಕಾರ ಬಳಿಕ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವಸರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಆರಂಭಗೊಂಡಿತ್ತು . ಇದ್ದ ಡಾಮಾರನ್ನು ಸಂಪೂರ್ಣ ತೆಗೆದುಹಾಕಿ ರಸ್ತೆ ದುರಸ್ತಿ ಪ್ರಾರಂಭಗೊಂಡಿತ್ತು . ಚುನಾವಣಾ ನೀತಿಸಂಹಿತೆ ಪ್ರಯುಕ್ತ ಕಾಮಗಾರಿ ಸ್ಥಗಿತಗೊಂಡಿತ್ತು . ಕಾಮಗಾರಿ ಆರಂಭಿಸಿದ ಗುತ್ತಿಗೆದಾರ ಇದೀಗ ಅರ್ಧದಲ್ಲಿ ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ರಸ್ತೆ ದುರವಸ್ಥೆಯಿಂದ ಅಕ್ರೋಶಿತ ಸ್ಥಳೀಯ ಅಟೊ ರಿಕ್ಷಾ ಚಾಲಕ-ಮಾಲಕರ ಸಂಘ ಹಾಗೂ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ.

ಗ್ರಾ.ಪಂ.ಸದಸ್ಯರ ರಾಜಿನಾಮೆ  .

ಸ್ಥಳೀಯ ಗ್ರಾಮ ಪಂಚಾಯತ್ ರಸ್ತೆ ಅಭಿವೃದ್ಧಿಗೆ ಸಂಬಂದಿಸಿದ ಇಲಾಖಾಧಿಕಾರಿಗಳಲ್ಲಿ , ಜನಪ್ರತಿನಿಗಳಲ್ಲಿ ಹಲವಾರು ಬಾರಿ ಮನವಿ ಮಾಡಿದ್ದು ಇದೀಗ ರಸ್ತೆ ದುರವಸ್ಥೆಯಿಂದ  ಮುಖಮುಚ್ಚಿಕೊಳ್ಳುವಂತಾಗಿದೆ. ಈ ಭಾಗದ ಹಾಲಿ ಗ್ರಾ.ಪಂ.ಸದಸ್ಯ , ಮಾಜಿ ಅಧ್ಯಕ್ಷ  ಶೈಲೇಶ್  ಕು ಮಾರ್  ಮತ್ತು ಇನ್ನೋರ್ವ ಸದಸ್ಯ ರಾಜಶೇಖರ ಶೆಟ್ಟಿ ಅವರು ತಮ್ಮ ಸದಸ್ಯತ್ವಕ್ಕೆ ಸೋಮವಾರ ರಾಜಿನಾಮೆ ನೀಡಿದ್ದಾರೆ. ತಮ್ಮ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಸಿದ್ದರೂ ರಸ್ತೆ ಅಭಿವೃದ್ಧಿ ಕಾರ್ಯ ಸಾಧ್ಯವಾಗದೆ ಸಾರ್ವಜನಿಕರಿಗೆ ಉತ್ತರಿಸಲು ಅಸಾಧ್ಯವಾದ ಕಾರಣ ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿದ್ದೇವೆ. ಮುಂದಕ್ಕೆ ಸಾರ್ವಜನಿಕರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಇಬ್ಬರೂ ತಿಳಿಸಿದ್ದಾರೆ.

 

By Suddi9

Leave a Reply

Your email address will not be published. Required fields are marked *