ಉಳ್ಳಾಲ:ಇಸ್ಲಾಂ ಧರ್ಮಕ್ಕಾಗಿ ಹಗಲಿರುಳು ಜೀವನವನ್ನು ಮುಡಿಪಾಗಿಟ್ಟಿದ್ದ ಪ್ರವಾದಿಯವರು ಮುಸ್ಲಿಮರಿಗೆ ಧಾರ್ಮಿಕ ವಿಚಾರಗಳನ್ನು ಬೋಧಿಸಲು ಅವರ ಕುಟುಂಬವನ್ನೇ ಬಿಟ್ಟು ಹೋದವರು. ಅವರ ಕುಟುಂಬವನ್ನು ಗೌರವಿಸುವ ಕೆಲಸ ನಮ್ಮಿಂದಾಗಬೇಕಾಗಿದೆ. ಆ ಕೆಲಸವನ್ನು ಈಗ ಮುಸ್ಲಿಮರು ಅಲ್ಲಲ್ಲಿ ಅನುಸ್ಮರಣೆ ಕಾರ್ಯಕ್ರಮದ ಮೂಲಕ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಬುಖಾರಿ ಜುಮಾ ಮಸೀದಿಯ ಅಧ್ಯಕ್ಷ, ಸುರಿಬೈಲ್ ದಾರುಲ್ ಅಶ್ಅರಿಯ್ಯದ ಮೆನೇಜರ್ ಮುಹಮ್ಮದ್ ಅಲಿ ಸಖಾಫಿ ಹೇಳಿದರು.

ಅವರು ಕಿನ್ಯ ಬುಖಾರಿ ಮಸೀದಿಯಲ್ಲಿ ಹುಸೈನಿಯಾ ಇಸ್ಲಾಮಿಕ್ ಸೆಂಟರ್, ಬುಖಾರಿ ಜುಮಾ ಮಸೀದಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಪೊಸೋಟ್ ತಂಙಳ್ ಸಂಸ್ಮರಣೆ ಮಹಾ ಸಂಗಮ ಹಾಗೂ ಎಸ್ವೈಎಸ್ ದೇರಳಕಟ್ಟೆ ಸೆಂಟರ್ನ ಮೆಹಫಿಲೆ ತ್ವೈಬಾದ ಗುರುವಾರ ನಡೆದಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗುರುಗಳ ಮಾತು ಅನುಸರಿಸಿಕೊಂಡು ಹೋಗಬೇಕು ಎನ್ನುವುದನ್ನು ಇಸ್ಲಾಂ ಕಲ್ಪಿಸುತ್ತದೆ. ಹಿರಿಯರ, ನಾಯಕರ, ಗುರುಗಳ ಮಾತು ಮೀರಿ ಹೋದವರ ಜೀವನ ಯಶಸ್ವಿಯಾಗದು ಎಂದರು.
ಕರ್ನಾಟಕ ಪೊಸೋಟ್ ತಂಙಳ್ ಅನುಸ್ಮರಣ ಸಮಿತಿಯ ಅಧ್ಯಕ್ಷ ಸಯ್ಯಿದ್ ಸೈದಲವಿ ತಂಙಳ್ ಕಿನ್ಯ ದುವಾ ನೆರವೇರಿಸಿದರು. ಸಯ್ಯಿದ್ ಜಲಾಲುದ್ದೀನ್ ತಂಙಳ್ ಪೊಸೋಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಫೀಖ್ ಸಅದಿ ದೇಲಂಪಾಡಿ, ಕನ್ನಂಗಾರ್ ಮುದರ್ರಿಸ್ ಅಶ್ರಫ್ ಸಖಾಫಿ ಕಿನ್ಯ, ಬುಖಾರಿ ಮಸೀದಿ ಖತೀಬ್ ನಿಸಾರ್ ಮದನಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಿನ್ಯ, ಎಸ್ಜೆಎಂ ದೇರಳಕಟ್ಟೆ ರೇಂಜ್ ಅಧ್ಯಕ್ಷ ಇಸ್ಮಾಯಿಲ್ ಸಅದಿ ಉರುಮಣೆ, ಅಲ್ ಮದೀನ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ, ಕಲ್ಕಟ್ಟ ಮಸೀದಿ ಖತೀಬ್ ಇಝುದ್ದೀನ್ ಅಹ್ಸನಿ, ಕೆಸಿಎಫ್ ಜುಬೈಲ್ ಕಾರ್ಯದರ್ಶಿ ಪಿ.ಎಂ.ಉಸ್ಮಾನ್ ಝುಹ್ರಿ, ಕೆಎಚ್ ಅಹ್ಮದ್ ಕುಂಞÂ ಕಿನ್ಯ, ಬುಖಾರಿ ಮಸೀದಿ ಕಾರ್ಯದರ್ಶಿ ಅಬ್ಬಾಸ್ ಸೆಟ್ಟಿಬೈಲ್, ಕಿನ್ಯ ಮಸೀದಿಯ ಉಪಾಧ್ಯಕ್ಷ ಅಬ್ದುಲ್ಲ ಮಟದೈತಳು ಕಿನ್ಯ ಗ್ರಾ.ಪಂ. ಉಪಾಧ್ಯಕ್ಷ ಸಿರಾಜ್ ಕಿನ್ಯ ಮೊದಲಾದವರು ಉಪಸ್ಥಿತರಿದ್ದರು. ಕೆ.ಎಚ್. ಇಸ್ಮಾಯಿಲ್ ಸಅದಿ ಅತಿಥಿಗಳನ್ನು ಸ್ವಾಗತಿಸಿದರು.
