ಉಳ್ಳಾಲ: ನೆಪೋಯ ನರ್ಸಿಂಗ್ ಕಾಲೇಜು , ಯೆನೆಪೋಯ ವಿಶ್ವವಿದ್ಯಾಲಯವು ವಿಶ್ವ ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ಸೆಪ್ಟೆಂಬರ್ 7, 2016 ರಂದು ಯೆನೆಪೋಯ ಆಸ್ಪತ್ರೆ ದೇರಳಕಟ್ಟೆಯ ಹೊರರೋಗಿ ವಿಭಾಗಾದಲ್ಲಿ ಪೌಷ್ಟಿಕ ಆಹಾರದ ಪ್ರದರ್ಶನವನ್ನು ಏರ್ಪಡಿಸಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಆಶಾ ಪಿ ಶೆಟ್ಟಿ , ಸಮುದಾಯ ಶುಶ್ರೂಷಾ ವಿಭಾಗದ ಮುಖ್ಯಸ್ಥೆ ಡಾ.ಡೆವಿನ ಈ ರೊಡ್ರಿಗಸ್ , ಕಾಲೇಜಿನ ಉಪನ್ಯಾಸಕ ವೃಂದ, ಕಾಲೇಜಿನ ವಿದ್ಯಾರ್ಥಿಗಳು ಹಾಗು ಹೊರ ರೋಗಿಗಳು ಉಪಸ್ಥಿತರಿದ್ದರು. ರಕ್ತಹೀನತೆಗೆ ಮನೆಮದ್ದು , ಗರ್ಭಿಣಿಯರ ಹಾಗು ಬಾಣಂತಿಯರ ಆಹಾರ , ಮದುಮೇಹ ಮತ್ತು ರಕ್ತದೊತ್ತಡದ ಆಹಾರ , ಅಸ್ತ್ರೀಯೊಪೊರೊಸಿಸ್ ಗೆ ಆಹಾರ ಹಾಗು ಆಹಾರ ತಟ್ಟೆಗಳನ್ನು ಪ್ರದರ್ಶಿಸಲಾಗಿತ್ತು.

