ಉಳ್ಳಾಲ: ಪ್ರಾರ್ಥನೆಗೆ ಮಹತ್ವ ಇಸ್ಲಾಂ ಕಲ್ಪಿಸಿದೆ. ಪ್ರತಿಯೊಂದು ಸಮಸ್ಯೆಗೆ ಪರಿಹಾರ ದ್ಸಿಕ್ರ್, ಸ್ವಲಾತ್, ಮತ್ತು ಪ್ರಾರ್ಥನೆ ಪರಿಹಾರವಾಗಿದೆ. ಪ್ರಾರ್ಥನೆ ಮತ್ತು ಆರಾಧನೆ ಮಾಡುವವರಿಗೆ, ಧರ್ಮ ಮತ್ತು ಸಮಾಜದ ಬಗ್ಗೆ ಅರ್ಥ ಮಾಡಿಕೊಂಡವರಿಗೆ ಸಮಸ್ಯೆಗಳು ಬರುವುದು ಕಡಿಮೆ. ಬಂದರೆ ಪರಿಹಾರ ಕೂಡಾ ಆಗುತ್ತದೆ ಎಂದು ಅಲ್ ಮದೀನ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಹೇಳಿದರು

ಅವರು ಮಜ್ಲಿಸ್ ಎಜ್ಯುಪಾರ್ಕ್ ಮುಡಿಪು ಇದರ ಆಶ್ರಯದಲ್ಲಿ ಮುಡಿಪುವಿನಲ್ಲಿ ಶುಕ್ರವಾರ ನಡೆದ ಸಖಾಫಿಯ್ಯ ರಾತೀಬ್ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಂದು ಕಾರ್ಯಗಳು ಮಾಡುವಾಗ ಹೇಳಬೇಕಾದ ದ್ಸಿಕ್ರ್‍ಗಳು ಇವೆ. ಅದನ್ನು ಜೀವನದಲ್ಲಿ ಅಳವಡಿಸಿಕೊಂಡುಬರಬೇಕು ಎಂದು ಕರೆ ನೀಡಿದರುಸಯ್ಯದ್ ಮಹಮ್ಮದ್ ಅಶ್ರಫ್ ತಂಙಳ್ ಆದೂರು ದುವಾ ನೆರವೇರಿಸಿದರು.
ಎಸ್‍ವೈಎಸ್ ಮುಡಿಪು ಸೆಂಟರ್ ಅಧ್ಯಕ್ಷ ಎಸ್‍ಕೆ ಖಾದರ್ ಹಾಜಿ, ಬಶೀರ್ ಮುಡಿಪು, ಎಸ್‍ವೈಎಸ್ ಜಿಲ್ಲಾ ಸಮಿತಿ ಸದಸ್ಯ ಸಿದ್ದೀಕ್ ಸಖಾಫಿ ಮೂಳೂರು, ಜಮಾಲುದ್ದೀನ್ ಸಖಾಫಿ ಮಹಮ್ಮದ್ ಶಾಲಿಮಾರ್, ಬಶೀರ್ ಕುರ್ನಾಡ್, ಬಾವಾ ಹಾಜಿ, ಅಬೂಬಕರ್ ಮಧ್ಯನಡ್ಕಮೊದಲಾದವರು ಉಪಸ್ಥಿತರಿದ್ದರು. ಕೆ.ಇ. ಅಬ್ದುಲ್ ಖಾದರ್ ಸಾಲೆತ್ತೂರು ಸ್ವಾಗತಿಸಿದರು.

