ಬಂಟ್ವಾಳ: ಮಹಿಳೆಯೋರ್ವಳು ಆರೋಗ್ಯವಂತಳಾದರೆ ದೇಶ ಆರೋಗ್ಯವಂತಾಗುತ್ತದೆ , ಸೌಹಾರ್ದ ಬದುಕಿನಿಂದಾಗಿ ಮನುಷ್ಯರಿಗೆ ಶಾಂತಿ, ನೆಮ್ಮದಿ ಸಿಕ್ಕರೆ ಆರೋಗ್ಯ ತನ್ನಷ್ಟಕ್ಕೆ ವೃದ್ದಿಯಾಗುತ್ತದೆ ಎಂದು ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋeನೆ ವಿಟ್ಲ, ಗ್ರಾ.ಪಂ. ಮಂಚಿ, ಸ್ತ್ರೀ ಶಕ್ತಿ ಗುಂಪುಗಳು ಮಂಚಿ, ಪ್ರಾ. ಆರೋಗ್ಯ ಕೇಂದ್ರ ಮಂಚಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಮತ್ತು ಮಹಿಳಾ ಗ್ರಾಮ ಸಭೆಯನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಂದ ಮಾತ್ರ ಆರೋಗ್ಯವಂತ, ಶಾಂತಿ ನೆಮ್ಮದಿಯ ಸಮಾಜ ನಿರ್ಮಾಣ ಸಾಧ್ಯ ಎಂದರು.

dsc_4259
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮಲೇರಿಯಾ ಪರಿವೀಕ್ಷಕ ಜಯರಾಮ ಪೌಷ್ಠಿಕತೆ ಮತ್ತು ಡೆಂಗ್ಯೂ ಜ್ವರದ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಹಾಗೂ ವೈದ್ಯಾಧಿಕಾರಿ ಭವ್ಯ ಇವರು ರಕ್ತಹೀನತೆ ಮತ್ತು ಶಿಶು ಮರಣದರವನ್ನು ಕಡಿಮೆಗೊಳಿಸುವ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ, ಉಪಾಧ್ಯಕ್ಷ ಮೋಹನದಾಸ ಶೆಟ್ಟಿ, ಪಂ. ಅಭಿವೃದ್ದಿ ಅಧಿಕಾರಿ ಮಾಯಾ ಕುಮಾರಿ, ಸದಸ್ಯರುಗಳಾದ ಇಬ್ರಾಹಿಂ, ಕೇಶವ ಭಟ್, ಬದ್ರುದ್ದೀನ್, ಕೃಷ್ಣಪ್ಪ ಬಂಗೇರ, ಪುಷ್ಪ ಕಾಮತ್, ಭಾಗೀರಥಿ, ಚೆನ್ನಮ್ಮ, ರೋಜಿ ಡಿಮೆಲ್ಲೊ, ಸುಮತಿ, ಆಸ್ಯಮ್ಮ, ಸುಮ, ಹಿರಿಯ, ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸದಸ್ಯರು. ಅಂ.ಕಾ. ಉಪಸ್ಥಿತರಿದ್ದರು.
ಮೇಲ್ವಿಚಾರಕಿ ಗುಣವತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಂ. ಕಾರ್ಯದರ್ಶಿ ರಮೇಶ ವಂದಿಸಿದರು.

By Suddi9

Leave a Reply

Your email address will not be published. Required fields are marked *